ಮುಂಬೈ: ಜೂನ್ 4, 2024 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ ಐಸಿಸಿ ಹೊಸ ಲೋಗೊವನ್ನು ಅನಾವರಣಗೊಳಿಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯವಹಿಸಲಿರುವ ಪುರುಷರ ಟಿ20 ವಿಶ್ವಕಪ್ ಹಾಗೂ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ20 ವರ್ಲ್ಡ್ಕಪ್ಗಾಗಿ ಒಂದೇ ವಿನ್ಯಾಸದ ಲೋಗೊವನ್ನು ಬಳಸಿರುವುದು ವಿಶೇಷ.
ಇನ್ನು ಈ ಲೋಗೊದಲ್ಲಿ ಬ್ಯಾಟ್, ಬಾಲ್ ಮತ್ತು ಎರ್ನಜಿಯನ್ನು ಸಂಕೇತಿಸುವ ಚಿಹ್ನೆಗಳನ್ನು ಬಳಸಲಾಗಿದ್ದು, ಈ ಮೂಲಕ ಉತ್ಸಾಹಭರಿತ ಟಿ20 ವಿಶ್ವಕಪ್ ಅನ್ನು ಪ್ರತಿಬಿಂಬಿಸಲಾಗಿದೆ. ಈ ಲೋಗೊ ವಿನ್ಯಾಸದ ಅನವಾರಣದ ವಿಡಿಯೋವನ್ನು ಐಸಿಸಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಇನ್ನು ಜೂನ್ 4, 2024 ರಿಂದ ಜೂನ್ 30 ರವರೆಗೆ ಟಿ20 ವಿಶ್ವಕಪ್ ಜರುಗಲಿದೆ. 20 ತಂಡಗಳು ಕಣಕ್ಕಿಳಿಯಲಿರುವ ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳನ್ನಾಡಲಾಗುತ್ತದೆ.
ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ತಂಡಗಳು ಹೀಗಿವೆ. . ಭಾರತ., ಅಫ್ಘಾನಿಸ್ತಾನ್., ಆಸ್ಟ್ರೇಲಿಯಾ., ಬಾಂಗ್ಲಾದೇಶ್., ಕೆನಡಾ., ಇಂಗ್ಲೆಂಡ್., ಐರ್ಲೆಂಡ್., ನಮೀಬಿಯಾ., ನೇಪಾಳ., ನೆದರ್ಲ್ಯಾಂಡ್ಸ್., ನ್ಯೂಝಿಲೆಂಡ್., ಒಮಾನ್., ಪಾಕಿಸ್ತಾನ್., ಪಪುವಾ ನ್ಯೂಗಿನಿಯಾ., ಸ್ಕಾಟ್ಲೆಂಡ್.,ಸೌತ್ ಆಫ್ರಿಕಾ ಆಫ್ರಿಕಾ., ಶ್ರೀಲಂಕಾ., ಉಗಾಂಡ., ಯುಎಸ್ಎ., ವೆಸ್ಟ್ ಇಂಡೀಸ್.
ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…
ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…
ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ…
ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಹೌದು. .…
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…
ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.