News Karnataka Kannada
Tuesday, April 30 2024
ಕ್ರೀಡೆ

ಈ ಸೋಲಿನ ಬಗ್ಗೆ ಈಗಲೂ ಪಶ್ಚಾತಾಪವಿದೆ: ಶೇನ್ ವಾಟ್ಸನ್

2016ರ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು  ಮತ್ತು ಸನ್​ರೈಸರ್ಸ್ ಹೈದರಾಬಾದ್  ತಂಡಗಳು ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ  ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಆರ್​ಸಿಬಿ ಕೇವಲ 8 ರನ್​ಗಳಿಂದ ಕೈಚೆಲ್ಲಿಕೊಂಡಿತು. ಈ ಸೋಲಿನ ಬಗ್ಗೆ ಈಗಲೂ ಪಶ್ಚಾತಾಪ ಪಡುತ್ತಿರುವುದಾಗಿ ಆರ್​ಸಿಬಿ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ತಿಳಿಸಿದ್ದಾರೆ.
Photo Credit : NewsKarnataka

ಬೆಂಗಳೂರು: 2016ರ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು  ಮತ್ತು ಸನ್​ರೈಸರ್ಸ್ ಹೈದರಾಬಾದ್  ತಂಡಗಳು ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ  ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಆರ್​ಸಿಬಿ ಕೇವಲ 8 ರನ್​ಗಳಿಂದ ಕೈಚೆಲ್ಲಿಕೊಂಡಿತು. ಈ ಸೋಲಿನ ಬಗ್ಗೆ ಈಗಲೂ ಪಶ್ಚಾತಾಪ ಪಡುತ್ತಿರುವುದಾಗಿ ಆರ್​ಸಿಬಿ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ತಿಳಿಸಿದ್ದಾರೆ.

ಆರ್​ಸಿಬಿ ತಂಡವು 2016 ರಲ್ಲೇ ಕಪ್ ಗೆಲ್ಲಬೇಕಿತ್ತು. ಅವತ್ತು ನನ್ನ ಕಳಪೆ ಪ್ರದರ್ಶನಿಂದಾಗಿ ಆರ್​ಸಿಬಿ ತಂಡ ಚೊಚ್ಚಲ ಬಾರಿಗೆ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿತು.

ಆದರೆ ಅಂದು ನಾನು 4 ಓವರ್​ಗಳಲ್ಲಿ 61 ರನ್ ನೀಡಿದ್ದೆ. ಕೊನೆಯ ಓವರ್​ನಲ್ಲಿ 24 ರನ್ ನೀಡಿದ್ದು ಆರ್​ಸಿಬಿ ಪಾಲಿಗೆ ದುಬಾರಿಯಾಯಿತು. ಅಲ್ಲದೆ ಬ್ಯಾಟಿಂಗ್​ನಲ್ಲೂ ವಿಫಲನಾದೆ. ಅಂತಹದೊಂದು ಅವಕಾಶವನ್ನು ಕೈ ತಪ್ಪಿಸಿದಕ್ಕಾಗಿ ನಾನು ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಶೇನ್ ವಾಟ್ಸನ್ ತಿಳಿಸಿದ್ದಾರೆ.

2016ರ  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಹೆಚ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು.

ಇನಿಂಗ್ಸ್ ಆರಂಭಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡವು 16.2 ಓವರ್​ಗಳಲ್ಲಿ 150 ರನ್​ ಕಲೆಹಾಕಿತು. ಈ ಹಂತದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಆರ್​ಸಿಬಿ ರನ್​ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಪರಿಣಾಮ 19 ಓವರ್​ಗಳ ಮುಕ್ತಾಯದ ವೇಳೆ ಎಸ್​ಆರ್​ಹೆಚ್​ ತಂಡದ ಸ್ಕೋರ್ 184 ರನ್​ಗಳು.

ಆದರೆ ಕೊನೆಯ ಓವರ್​ನಲ್ಲಿ ಬೆನ್ ಕಟ್ಟಿಂಗ್ ಶೇನ್ ವಾಟ್ಸನ್ ಎಸೆದ ಅಂತಿಮ ಓವರ್​ನಲ್ಲಿ 4, 6, 6, 1, 1, 6 ಸಿಡಿಸುವ ಮೂಲಕ ಬರೋಬ್ಬರಿ 24 ರನ್ ಕಲೆಹಾಕಿದರು. ಈ ಮೂಲಕ ಸನ್​ರೈಸರ್ಸ್​ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.

209 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 10.3 ಓವರ್​ಗಳಲ್ಲಿ 114 ರನ್ ಕಲೆಹಾಕಿತು.

ಇದಾಗ್ಯೂ 15.3 ಓವರ್​ಗಳಲ್ಲಿ ಆರ್​ಸಿಬಿ 160 ರನ್​ ಗಳಿಸಿತ್ತು. ಹೀಗಾಗಿ ಆರ್​ಸಿಬಿಗೆ ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಬೌಲಿಂಗ್​ನಲ್ಲಿ ದುಬಾರಿಯಾಗಿದ್ದ ಶೇನ್ ವಾಟ್ಸನ್ ಬ್ಯಾಟಿಂಗ್​ನಲ್ಲಿ ವಿಫಲರಾದರು. ಕೇವಲ 11 ರನ್​ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಹೊರ ನಡೆದರು. ಅಂತಿಮವಾಗಿ ಆರ್​ಸಿಬಿ 200 ರನ್​ಗಳಿಸಿ 8 ರನ್​ಗಳಿಂದ ಸೋಲೊಪ್ಪಿಕೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು