Ad

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಎಷ್ಟು ಕೋಟಿ ಸಿಕ್ತು ಗೊತ್ತಾ?

ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ ತಂಡಕ್ಕೆ ಭರ್ಜರಿ 20 ಕೋಟಿ 42 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. ರನ್ನರ್ ಅಪ್ ಆದ ದಕ್ಷಿಣ ಕನ್ನಡಕ್ಕೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ.

ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ ತಂಡಕ್ಕೆ ಭರ್ಜರಿ 20 ಕೋಟಿ 42 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. ರನ್ನರ್ ಅಪ್ ಆದ ದಕ್ಷಿಣ ಕನ್ನಡಕ್ಕೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ.

Ad
300x250 2

ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇಡೀ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾಗೆ ಪ್ಲೇಯರ್​ ಆಫ್ ದಿ ಟೂರ್ನಮೆಂಟ್​ ಪ್ರಶಸ್ತಿ ಲಭಿಸಿದೆ.

ಟಿ20 ವಿಶ್ವಕಪ್ ಘೋಷಣೆ ಮಾಡಿದಾಗ ಐಸಿಸಿ ಒಟ್ಟು 11.25 ಮಿಲಿಯನ್ ಅಮೆರಿಕನ್ ಡಾಲರ್ ಘೋಷಣೆ ಮಾಡಿತ್ತು. ಭಾರತೀಯ ಕರೆನ್ಸಿಯಲ್ಲಿ ಅದರ ಮೌಲ್ಯ ಸುಮಾರು ರೂ 93.5 ಕೋಟಿಗೆ ಸಮನಾಗಿದೆ.

2022ರಲ್ಲಿ ನಡೆದ ವಿಶ್ವಕಪ್‌ಗೆ ಹೋಲಿಸಿದರೆ ಬಹುಮಾನದ ಮೊತ್ತ ದುಪ್ಪಟ್ಟಾಗಿದೆ. ಏಕೆಂದರೆ ಎರಡು ವರ್ಷಗಳ ಹಿಂದೆ ವಿಶ್ವಕಪ್​​ನ ಬಹುಮಾನದ ಒಟ್ಟು ಮತ್ತು 46.6 ಕೋಟಿ ರೂಪಾಯಿ ಆಗಿತ್ತು. ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ 13.3 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು.

ಸೆಮಿ ಫೈನಲ್​​​ನಲ್ಲಿ ಸೋತ ತಂಡಗಳಿಗೆ ತಲಾ 6.5 ಕೋಟಿ ರೂಪಾಯಿ ಸಿಕ್ಕಿದೆ. ಸೆಮಿಫೈನಲ್ ತಂಡಗಳಲ್ಲದೇ ಸೂಪರ್-8 ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ 4 ತಂಡಗಳಿಗೂ ಸಾಕಷ್ಟು ಹಣವನ್ನು ನಿಗದಿಪಡಿಸಲಾಗಿದೆ. ಸೂಪರ್-8ರಲ್ಲಿ ಆಡಿದ ಪ್ರತಿ ತಂಡಕ್ಕೆ ಅಂದಾಜು 3.19 ಕೋಟಿ ರೂ. ಬಹುಮಾನ ಸಿಗಲಿದೆ.

Ad
Ad
Nk Channel Final 21 09 2023
Ad