Bengaluru 23°C
Ad

ಪ್ಯಾರಾಲಿಂಪಿಕ್ಸ್​ : ಭಾರತಕ್ಕೆ 27ನೇ ಪದಕ ಗೆದ್ದು ಕೊಟ್ಟ ಹೊಕಾಟೊ ಹೊಟೊಝೆ

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್  2024 ರ ಪುರುಷರ ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಭಾರತದ ಹೊಕಾಟೊ ಹೊಟೊಝೆ ಸೆಮಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ಶುಕ್ರವಾರ ಸ್ಟೇಡ್ ಡಿ ಫ್ರಾನ್ಸ್‌ ಮೈದಾನದಲ್ಲಿ ನಡೆದ ಫೈನಲ್ ಸುತ್ತಿನಲ್ಲಿ 14.65 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಹೊಕಾಟೊ ಮೂರನೇ ಸ್ಥಾನ ಪಡೆದರು. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 27ನೇ ಪದಕ ಗೆದ್ದುಕೊಟ್ಟರು. 

ಪ್ಯಾರಿಸ್:   ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್  2024 ರ ಪುರುಷರ ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಭಾರತದ ಹೊಕಾಟೊ ಹೊಟೊಝೆ ಸೆಮಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ಶುಕ್ರವಾರ ಸ್ಟೇಡ್ ಡಿ ಫ್ರಾನ್ಸ್‌ ಮೈದಾನದಲ್ಲಿ ನಡೆದ ಫೈನಲ್ ಸುತ್ತಿನಲ್ಲಿ 14.65 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಹೊಕಾಟೊ ಮೂರನೇ ಸ್ಥಾನ ಪಡೆದರು. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 27ನೇ ಪದಕ ಗೆದ್ದುಕೊಟ್ಟರು.

27 ಪದಕಗಳು:

ಭಾರತವು 9 ದಿನಗಳ ಮುಕ್ತಾಯದ ವೇಳೆಗೆ ಒಟ್ಟು 27 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 6 ಚಿನ್ನ, 9 ಬೆಳ್ಳಿ ಹಾಗೂ 12 ಕಂಚಿನ ಪದಕಗಳು ಒಳಗೊಂಡಿವೆ. ಇನ್ನು ಪವರ್​ ಲಿಫ್ಟಿಂಗ್ ಸೇರಿದಂತೆ ಒಂದಷ್ಟು ಸ್ಪರ್ಧೆಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದು, ಹೀಗಾಗಿ ಈ ಪದಕಗಳ ಸಂಖ್ಯೆಯು 30ರ ಗಡಿದಾಟುವ ನಿರೀಕ್ಷೆಯಿದೆ.

Ad
Ad
Nk Channel Final 21 09 2023