Ad

ಟಿ20 ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ

Hardik (1)

ಮುಂಬೈ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟಿ20 ಬ್ಯಾಟರ್​ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನ ಅಲಂಕರಿಸಿದರೆ, ಬೌಲರ್​ಗಳ ಪಟ್ಟಿಯಲ್ಲಿ ಇಂಗ್ಲೆಂಡ್​ನ ಆದಿಲ್ ರಶೀದ್ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಟಿ20 ಆಲ್​ರೌಂಡರ್​ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Ad
300x250 2

ಇನ್ನು ಟಿ20 ಬ್ಯಾಟರ್​ಗಳ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಒಂದೇ ಒಂದು ಪಂದ್ಯವಾಡದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ 7ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟಿ20 ಬ್ಯಾಟರ್​ಗಳ ಟಾಪ್​-10 ಪಟ್ಟಿ:
ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 844 ರೇಟಿಂಗ್

ಸೂರ್ಯಕುಮಾರ್ ಯಾದವ್ (ಭಾರತ)- 838 ರೇಟಿಂಗ್

ಫಿಲ್ ಸಾಲ್ಟ್ (ಇಂಗ್ಲೆಂಡ್)- 797 ರೇಟಿಂಗ್

ಬಾಬರ್ ಆಝಂ (ಪಾಕಿಸ್ತಾನ್)- 755 ರೇಟಿಂಗ್

ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)- 746 ರೇಟಿಂಗ್

ಜೋಸ್ ಬಟ್ಲರ್ (ಇಂಗ್ಲೆಂಡ್)- 746 ರೇಟಿಂಗ್

ಯಶಸ್ಸಿ ಜೈಸ್ವಾಲ್ (ಭಾರತ)- 659 ರೇಟಿಂಗ್

ಬ್ರಾಂಡನ್ ಕಿಂಗ್ (ವೆಸ್ಟ್ ಇಂಡೀಸ್)- 656 ರೇಟಿಂಗ್

ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್)- 655 ರೇಟಿಂಗ್

ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 646 ರೇಟಿಂಗ್

ಟಿ20 ಬೌಲರ್​ಗಳ ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಭಾರತದ ಇಬ್ಬರು ಬೌಲರ್​ಗಳು ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಟಾಪ್-10 ನಲ್ಲಿ ಕಾಣಿಸಿಕೊಂಡಿಲ್ಲ. ಟಿ20 ಬೌಲರ್​ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಬುಮ್ರಾ 12ನೇ ಸ್ಥಾನದಲ್ಲಿದ್ದಾರೆ.

ಟಿ20 ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಿ20 ಆಲ್​​ರೌಂಡರ್​ಗಳ ಟಾಪ್-10 ಪಟ್ಟಿ:

ಹಾರ್ದಿಕ್ ಪಾಂಡ್ಯ (ಭಾರತ)- 222 ರೇಟಿಂಗ್

ವನಿಂದು ಹಸರಂಗ (ಶ್ರೀಲಂಕಾ)- 222 ರೇಟಿಂಗ್

ಮಾರ್ಕಸ್ ಸ್ಟೋಯಿನಿಸ್ (ಆಸ್ಟ್ರೇಲಿಯಾ)- 211 ರೇಟಿಂಗ್

ಸಿಕಂದರ್ ರಾಝ (ಝಿಂಬಾಬ್ವೆ)- 210 ರೇಟಿಂಗ್

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)- 206 ರೇಟಿಂಗ್

ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್)- 205 ರೇಟಿಂಗ್

ದೀಪೇಂದ್ರ ಸಿಂಗ್ ಅರೀ (ನೇಪಾಳ)- 199 ರೇಟಿಂಗ್

ಲಿಯಾಮ್ ಲಿವಿಂಗ್​ಸ್ಟೋನ್ (ಇಂಗ್ಲೆಂಡ್)- 187 ರೇಟಿಂಗ್

ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 186 ರೇಟಿಂಗ್

ಮೊಯೀನ್ ಅಲಿ (ಇಂಗ್ಲೆಂಡ್)- 174 ರೇಟಿಂಗ್

ಟಿ20 ಬೌಲರ್​ಗಳ ಟಾಪ್-10 ಪಟ್ಟಿ:

ಆದಿಲ್ ರಶೀದ್ (ಇಂಗ್ಲೆಂಡ್)- 718 ರೇಟಿಂಗ್

ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ)- 675 ರೇಟಿಂಗ್

ವನಿಂದು ಹಸರಂಗ (ಶ್ರೀಲಂಕಾ)- 674 ರೇಟಿಂಗ್

ರಶೀದ್ ಖಾನ್ (ಅಫ್ಘಾನಿಸ್ತಾನ್)- 668 ರೇಟಿಂಗ್

ಜೋಶ್ ಹ್ಯಾಝಲ್​ವುಡ್ (ಆಸ್ಟ್ರೇಲಿಯಾ)- 662 ರೇಟಿಂಗ್

ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್)- 659 ರೇಟಿಂಗ್

ಅಕ್ಷರ್ ಪಟೇಲ್ (ಭಾರತ)- 657 ರೇಟಿಂಗ್

ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 654 ರೇಟಿಂಗ್

ಕುಲ್ದೀಪ್ ಯಾದವ್ (ಭಾರತ)- 654 ರೇಟಿಂಗ್

ಫಝಲ್​ಹಕ್ ಫಾರೂಖಿ (ಅಫ್ಘಾನಿಸ್ತಾನ್)- 645 ರೇಟಿಂಗ್

Ad
Ad
Nk Channel Final 21 09 2023
Ad