ಚೆನ್ನೈ: 2011ರ ವರ್ಲ್ಡ್ಕಪ್ ಗೆಲುವಿನ ಪ್ರಮುಖ ರುವಾರಿ ಎಂಎಸ್ ಧೋನಿ ಹಾಗೂ ಗೌತಮ್ ಗಂಭೀರ್ ಚಪಾಕ್ ಸ್ಟೇಡಿಯಂನಲ್ಲಿ ಪ್ರೀತಿಯಿಂದ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಧೋನಿ ಬಳಗ ಗೆದ್ದು ಬೀಗಿದೆ. ಪಂದ್ಯ ಮುಗಿದ ಬಳಿಕ ಒಬ್ಬರನ್ನೊಬ್ಬರನ್ನು ಹಗ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದಾರೆ.
ಹೌದು. . ಚೆನ್ನೈನ ಚಿದಂಬರಮ್ ಸ್ಟೇಡಿಯಂನಲ್ಲಿ ಸಿಎಸ್ಕೆ ಹಾಗೂ ಕೆಕೆಆರ್ ಪಂದ್ಯ ನಡೆದಿದೆ. ಟಾಸ್ ಗೆದ್ದ ಚೆನ್ನೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ತಂಡ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಟಾರ್ಗೆಟ್ ನೀಡಿತು. ಗೌತಮ್ ಅವರು ಕೆಕೆಆರ್ ತಂಡದ ಮೆಂಟರ್ ಆಗಿದ್ದಾರೆ.
ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದವರು ಬಂದು ಶೇಕ್ ಹ್ಯಾಂಡ್ ಮಾಡಿದರು. ಈ ವೇಳೆ ಗಂಭೀರ್ ಹಾಗೂ ಧೋನಿ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಗೌತಮ್ ಅವರು ಖುಷಿ ಖುಷಿಯಿಂದ ಧೋನಿಯನ್ನು ಅಪ್ಪಿದ್ದಾರೆ. ಈ ವಿಡಿಯೋ ಫ್ಯಾನ್ಸ್ ಪೇಜ್ಗಳಲ್ಲಿ ವೈರಲ್ ಆಗುತ್ತಿದೆ.
91 🫂 97 🥹#CSKvKKR #TATAIPL #IPLonJioCinema pic.twitter.com/F4DPU8axOi
— JioCinema (@JioCinema) April 8, 2024