2024ನೇ ಒಲಿಂಪಿಕ್ಸ್ನಲ್ಲಿ ಭಾರತ ಚಿನ್ನ ಕಸಿಯುವ ಕನಸು ಕಾಣುತ್ತಿದ್ದು, ನೀರಜ್ ಚೋಪ್ರಾ ಮೇಲೆ ಎಲ್ಲರ ನಿರೀಕ್ಷೆಯಿದೆ. ನೀರಜ್ ಚೋಪ್ರಾ ಒಂದು ವೇಳೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದರೆ ಎಲ್ಲರಿಗೂ ಉಚಿತ ವೀಸಾ ನೀಡುವುದಾಗಿ ಅಮೆರಿಕಾದಲ್ಲಿರುವ ಭಾರತೀಯ ಮೂಲಕ ಸ್ಟಾರ್ಟ್ಅಪ್ವೊಂದರ ಸಿಇಒ ಹೇಳಿದ್ದಾರೆ.
ಅಟ್ಲಿಸ್ ಸಂಸ್ಥಾಪಕರಾದ ಮೋಹಕ್ ನೆಕ್ತಾರವರು ಅಚ್ಚರಿಯ ಮಾತುಗಳು ಈಗ ವೈರಲ್ ಆಗಿದೆ. ಇವರು ವೀಸಾ ಸ್ಟಾರ್ಅಪ್ವೊಂದನ್ನು ನಡೆಸುತ್ತಿದ್ದು, ನೀರಜ್ ಚೋಪ್ರಾ ಭಾರತಕ್ಕೆ ಚಿನ್ನ ತಂದು ಕೊಟ್ಟರೆ ಅಟ್ಲಿಸ್ ತನ್ನ ಎಲ್ಲಾ ಬಳಕೆದಾರರಿಗೆ ಒಂದು ಇಡೀ ದಿನದ ವೀಸಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.
ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ ಅವರು, ‘ನೀರಜ್ ಚಿನ್ನ ಗೆದ್ದರೆ ವೈಯಕ್ತಿಕವಾಗಿ ಎಲ್ಲರಿಗೂ ಉಚಿತ ವೀಸಾ ಕಳುಹಿಸುತ್ತೇನೆ, ಹೋಗೋಣ’ ಎಂದು ಹೇಳಿದ್ದಾರೆ. ಜೊತೆಗೆ ಎಲ್ಲ ದೇಶಗಳಿಗೂ ಉಚಿತ ವೀಸಾ ನೀಡಲಾಗುವುದು. ಅರ್ಜಿದಾರರಿಗೆ ಯಾವುದೇ ವೆಚ್ಚವನ್ನು ಭರಿಸುವುದಿಲ್ಲ ಎಂದು ಹೇಳಿದ್ದಾರೆ. ಆಗಸ್ಟ್ 8 ರಂದು ನೀರಜ್ ತಮ್ಮ ತಾಖತ್ತನ್ನು ಪ್ಯಾರೀಸ್ನಲ್ಲಿ ತೋರಿಸಲಿದ್ದಾರೆ.