Ad

ಕೀನ್ಯಾ ತಂಡಕ್ಕೆ ಕನ್ನಡಿಗ, ಮಾಜಿ ಕ್ರಿಕೆಟಿಗ ಗಣೇಶ್‌ ಕೋಚ್‌

ಭಾರತ ತಂಡದ ಮಾಜಿ ಕ್ರಿಕೆಟಿಗ, ಕರ್ನಾಟಕದ ದೊಡ್ಡ ನರಸಯ್ಯ ಗಣೇಶ್‌ ಕೀನ್ಯಾ ಪುರುಷರ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದಾರೆ. 2026ರ ಟಿ20 ವಿಶ್ವಕಪ್‌ಗಾಗಿ “ಆಫ್ರಿಕಾ ಕ್ವಾಲಿಫೈಯರ್‌’ನಲ್ಲಿ ಆಡಲಿರುವ ಕೀನ್ಯಾಕ್ಕೆ ಗಣೇಶ್‌ ತರಬೇತಿ ನೀಡಲಿದ್ದಾರೆ.

ನೈರೋಬಿ: ಭಾರತ ತಂಡದ ಮಾಜಿ ಕ್ರಿಕೆಟಿಗ, ಕರ್ನಾಟಕದ ದೊಡ್ಡ ನರಸಯ್ಯ ಗಣೇಶ್‌ ಕೀನ್ಯಾ ಪುರುಷರ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದಾರೆ. 2026ರ ಟಿ20 ವಿಶ್ವಕಪ್‌ಗಾಗಿ “ಆಫ್ರಿಕಾ ಕ್ವಾಲಿಫೈಯರ್‌’ನಲ್ಲಿ ಆಡಲಿರುವ ಕೀನ್ಯಾಕ್ಕೆ ಗಣೇಶ್‌ ತರಬೇತಿ ನೀಡಲಿದ್ದಾರೆ.

ಬಲಗೈ ಮಧ್ಯಮ ವೇಗಿಯಾಗಿದ್ದ ದೊಡ್ಡ ಗಣೇಶ್‌ 1997ರಲ್ಲಿ ಭಾರತದ ಪರ 4 ಟೆಸ್ಟ್‌ ಹಾಗೂ ಒಂದು ಏಕದಿನ ಪಂದ್ಯ ಆಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 365 ವಿಕೆಟ್‌ ಹಾಗೂ 2,023 ರನ್‌ ಗಳಿಸಿದ ಸಾಧನೆ ಇವರದು. 1996-2011ರ ಅವಧಿಯಲ್ಲಿ 5 ಏಕದಿನ ವಿಶ್ವಕಪ್‌ಗಳಲ್ಲಿ ಆಡಿದ ಕೀನ್ಯಾ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿಲ್ಲದ ತಂಡ. 2003ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿದ ಹೆಗ್ಗಳಿಕೆ ಕೀನ್ಯಾ ತಂಡದ್ದಾಗಿತ್ತು. ಆಗ ಭಾರತದವರೇ ಆದ ಸಂದೀಪ್‌ ಪಾಟೀಲ್‌ ಕೀನ್ಯಾ ತಂಡದ ಕೋಚ್‌ ಆಗಿದ್ದರು.

 

 

Ad
Ad
Nk Channel Final 21 09 2023