Bengaluru 22°C
Ad

ಪಂದ್ಯಕ್ಕೆ ತೆರಳಿದ್ದ ಪಾಕ್ ಯೂಟ್ಯೂಬರ್‌ನನ್ನು ಗುಂಡಿಕ್ಕಿ ಕೊಂದ ಭದ್ರತಾ ಸಿಬ್ಬಂದಿ

ಪಂದ್ಯಕ್ಕೆ ತೆರಳಿದ್ದ ಪಾಕ್ ಯೂಟ್ಯೂಬರ್: ಗುಂಡಿಕ್ಕಿ ಕೊಂದ ಭದ್ರತಾ ಸಿಬ್ಬಂದಿ ಪ್ರಮುಖ ನಗರವಾದ ನ್ಯೂಯಾರ್ಕ್ ನಲ್ಲಿ ಹೊಸ ಸ್ಟೇಡಿಯಂ ನಿರ್ಮಿಸಿ ಅಲ್ಲಿ ಟಿ20 ವಿಶ್ವಕಪ್‌ ಆಡಿಸಲಾಗಿತ್ತು. ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಕಳೆದ ಭಾನುವಾರ ಇಲ್ಲಿ ನಡೆದಿತ್ತು.

ನ್ಯೂಯಾರ್ಕ್‌:   ಪ್ರಮುಖ ನಗರವಾದ ನ್ಯೂಯಾರ್ಕ್ ನಲ್ಲಿ ಹೊಸ ಸ್ಟೇಡಿಯಂ ನಿರ್ಮಿಸಿ ಅಲ್ಲಿ ಟಿ20 ವಿಶ್ವಕಪ್‌ ಆಡಿಸಲಾಗಿತ್ತು. ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಕಳೆದ ಭಾನುವಾರ ಇಲ್ಲಿ ನಡೆದಿತ್ತು.

ಐಸಿಸಿ ಟಿ20 ವಿಶ್ವಕಪ್ ಕೂಟದ ಪ್ರಚಾರಕ್ಕೆ ಹಲವು ಯೂಟ್ಯೂಬರ್ ಗಳು ಅಮೆರಿಕಾಗೆ ತೆರಳಿದ್ದಾರೆ. ಇದೇ ರೀತಿ ನ್ಯೂಯಾರ್ಕ್ ಗೆ ತೆರಳಿದ್ದ ಪಾಕಿಸ್ತಾನದ ಯೂಟ್ಯೂಬರ್ ಒಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪಂದ್ಯದ ಬಗ್ಗೆ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಯೂಟ್ಯೂಬರ್ ನ್ಯೂಯಾರ್ಕ್ ನ ಮೊಬೈಲ್ ಮಾರ್ಕೆಟ್ ಗೆ ತೆರಳಿದ್ದ. ಅಲ್ಲಿ ಹಲವರ ಬಳಿ ಅಭಿಪ್ರಾಯ ಸಂಗ್ರಹಿಸಿದ್ದ. ಅಲ್ಲಯೇ ಇದ್ದ ಭದ್ರತಾ ಸಿಬ್ಬಂದಿ ಬಳಿಯು ಮೈಕ್ ಇಟ್ಟಾಗ ಆತ ಪ್ರತಿಭಟಿಸಿದ್ದ. ಅವರ ನಡುವೆ ವಾಗ್ವಾದ ನಡೆದು ಭಧ್ರತಾ ಸಿಬ್ಬಂದಿ ತನ್ನ ಬಳಿಯಿದ್ದ ಗನ್ ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

 

Ad
Ad
Nk Channel Final 21 09 2023
Ad