Bengaluru 23°C
Ad

ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ

ಇತ್ತೀಚೆಗಷ್ಟೆ ದಿನೇಶ್‌ ಕಾರ್ತಿಕ್‌ ಅವರು ಕ್ರಿಕೆಟ್‌ಗೆ ವಿದಾಯ ಬಗ್ಗೆ ತಿಳಿಸಿದ್ದಾರೆ. ಫಿನೀಶರ್‌ ಎಂದೇ ಖ್ಯಾತಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ದಿನೇಶ್‌ ಕಾರ್ತಿಕ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ಶನಿವಾರ (ಜೂನ್‌ 1) ವಿದಾಯ ಹೇಳಿದ್ದಾರೆ.

ಚೆನ್ನೈ: ಇತ್ತೀಚೆಗಷ್ಟೆ ದಿನೇಶ್‌ ಕಾರ್ತಿಕ್‌ ಅವರು ಕ್ರಿಕೆಟ್‌ಗೆ ವಿದಾಯ ಬಗ್ಗೆ ತಿಳಿಸಿದ್ದಾರೆ. ಫಿನೀಶರ್‌ ಎಂದೇ ಖ್ಯಾತಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ದಿನೇಶ್‌ ಕಾರ್ತಿಕ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ಶನಿವಾರ (ಜೂನ್‌ 1) ವಿದಾಯ ಹೇಳಿದ್ದಾರೆ. ಜನ್ಮದಿನದಂದೇ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಾಗೂ ವಿಡಿಯೊ ಮೂಲಕ ಆರ್‌ಸಿಬಿ ಅಭಿಮಾನಿಗಳ ಪಾಲಿನ ನೆಚ್ಚಿನ ಡಿಕೆ ನಿವೃತ್ತಿ ಘೋಷಿಸಿದ್ದಾರೆ.

ಕೆಲವು ದಿನಗಳಿಂದ ನಾನು ಯೋಚಿಸುತ್ತಿದ್ದ ಕುರಿತು ಈಗ ಅಂತಿಮ ತೀರ್ಮಾನ ತೆಗೆದುಕೊಂಡಿದ್ದೇನೆ. ನಾನು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು, ಮುಂಬರುವ ಸವಾಲುಗಳನ್ನು ಎದುರಿಸಲು ನಾನು ಮುಂದಡಿ ಇಡುತ್ತಿದ್ದೇನೆ. ನನ್ನ ವೃತ್ತಿ ಜೀವನ ಪಯಣಕ್ಕೆ ಸಹಕಾರ ನೀಡಿದ ನನ್ನೆಲ್ಲ ತರಬೇತುದಾರರು, ನಾಯಕರು, ಆಯ್ಕೆದಾರರು, ತಂಡದ ಸದಸ್ಯರು, ಸಿಬ್ಬಂದಿಗೆ ಧನ್ಯವಾದಗಳು. ನಾನು ನನ್ನ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಅದೃಷ್ಟವಂತ ಎಂದೇ ಭಾವಿಸುತ್ತೇನೆ” ಎಂಬುದಾಗಿ ಅವರು ಭಾವುಕ ಪೋಸ್ಟ್‌ ಮಾಡಿದ್ದಾರೆ.

Ad
Ad
Nk Channel Final 21 09 2023
Ad