Bengaluru 19°C

ಮೊಡಂಕಾಪು ದೀಪಿಕಾ ಪ್ರೌಢ ಶಾಲೆಯಲ್ಲಿ ವಜ್ರಮಹೋತ್ಸವ, ಕ್ರೀಡಾಕೂಟ

ಮೊಡಂಕಾಪು ದೀಪಿಕಾ ಪ್ರೌಢ ಶಾಲೆಯಲ್ಲಿ ವಜ್ರಮಹೋತ್ಸವ, ಕ್ರೀಡಾಕೂಟ

ಬಂಟ್ವಾಳ : ದೀಪಿಕಾ ಪ್ರೌಢ ಶಾಲೆಗೆ ೬೦ ವರ್ಷ ತುಂಬಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಈ ಶಾಲಾ ಆವರಣದಲ್ಲಿ ಕ್ರೀಡೆಗೆ ಪೂರಕವಾದ ಎಲ್ಲಾ ರೀತಿಯ ವಾತಾವರಣ ಇದೆ. ಯಾವ ಕ್ಷೇತ್ರದಲ್ಲಿಯೂ ನಿರಂತರ ಅಭ್ಯಾಸ ಮಾಡಿದರೆ ಯಾವುದಾದರೊಂದು ಸಾಧನೆ ಮಾಡಲು ಸಾಧ್ಯ. ಇಲ್ಲಿ ನಡೆದ ಕ್ರೀಡಾ ಕೂಟ ಎಲ್ಲಾ ವಯೋಮಾನದವರನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಒಲಂಪಿಕ್ ಆಟಗಾರ್ತಿ ಸಹನಾ ಕುಮಾರಿ ನಾಗರಾಜ್ ಜಿ. ತಿಳಿಸಿದ್ದಾರೆ.


ಅವರು ದೀಪಿಕಾ ಪ್ರೌಢ ಶಾಲೆ ಮೊಡಂಕಾಪು ಇದರ ವಜ್ರಮಹೋತ್ಸವದ ಪ್ರಯುಕ್ತ ಮೊಡಂಕಾಪು ದೀಪಿಕಾ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಕಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು. ನಿವೃತ್ತ ಶಾರೀರಿಕ ಶಿಕ್ಷಣ ನಿರ್ದೇಶಕ ಪುರುಷೋತ್ತಮ ಪೂಜಾರಿ ಧ್ವಜಾರೋಹಣಗೈದರು.


ರಾಷ್ಟ್ರಮಟ್ಟದ ಕಬ್ಬಡ್ಡಿ ಆಟಗಾರ ಅಮರನಾಥ ರೈಯವರಿಗೆ ಗೌರವ ವಂದನೆ ನೀಡಿದ ಬಳಿಕ ಮಾತನಾಡಿ ಕ್ರೀಡೆ ಮತ್ತು ವಿದ್ಯೆಯ ಬಗ್ಗೆ ಈಗಿನ ವಿದ್ಯಾರ್ಥಿಗಳು ಗಮನಕೊಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ೪೦ ವರ್ಷಗಳ ಹಿಂದೆಯೇ ಆಗಿನ ಕ್ರೀಡಾ ಚಾಂಪಿಯನ್ ದಿ| ಉಮಾರಬ್ಬರವರ ಮೂಲಕ ದೀಪಿಕಾ ಪ್ರೌಢ ಶಾಲೆಯ ಪರಿಚಯವಾಗಿತ್ತು. ಅಂದಿನ ಕಾಲದಲ್ಲಿಯೂ ಒಳ್ಳೆಯ ಸುಸಂಸ್ಕೃತ ವಿದ್ಯಾಭ್ಯಾಸವನ್ನು ನೀಡಿ ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಿತ್ತು ಎಂದು ತಿಳಿಸಿದರು.


ವಜ್ರಮಹೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ ೬೦ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತಾgಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡಿದ್ದು ಬೃಹತ್ ಸಂಖ್ಯೆಯ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದೆ ಎಂದು ತಿಳಿಸಿದರು. ಬಿ.ಸಿ.ರೋಡಿನ ಲಯನ್ಸ್ ಕ್ಲಬ್‌ನಿಂದ ಕ್ರೀಡಾ ಜ್ಯೋತಿಯನ್ನು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಸುಪ್ರಿತ್ ಆಳ್ವ ಚಾಲನೆ ನೀಡಿದರು. ದೀಪಿಕಾ ಪ್ರೌಢ ಶಾಲೆಯ ಸಂಚಾಲಕ ವಂ| ಫಾದರ್ ವಲೇರಿಯನ್ ಡಿಸೋಜ ಸಮಾರಂಭ ಉದ್ಘಾಟಿಸಿದರು.


ಅಧ್ಯಕ್ಷತೆ ಕ್ರೀಡಾ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ವಹಿಸಿದ್ದರು. ಸದಾಶಿವ ಡಿ. ತುಂಬೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್, ಶಾಲಾ ಮುಖ್ಯೋಪಾದ್ಯಾಯ ಸಾದು, ದೀಪಿಕಾ ಪ್ರೌಢ ಶಾಲೆಯ ಟ್ರಸ್ಟಿ ಅಶ್ವನಿ ಕುಮಾರ್ ರೈ, ಅಮೆಚೂರ್ ಕಬಡ್ಡಿ ಅಸೋಸಿಯೇಶನಿನ ಅಧ್ಯಕ್ಷ ರತನ್ ಶೆಟ್ಟಿ ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ರೋಶನ್ ಡಿಸೋಜ, ಶಿವಪ್ರಸಾದ್ ಪ್ರಭು, ಟ್ರಸ್ಟಿ ಮಹಮ್ಮದ್ ವಳವೂರು, ಜೈಸನ್ ಮೊಂತೆರೋ, ಪ್ರೊ| ಗೋವರ್ದನ್ ರಾವ್, ಸತೀಶ್ ಭಂಡಾರಿ, ಸತೀಶ್ ಪಲ್ಲಮಜಲು, ರೊನಾಲ್ಡ್ ಫೆರ್ನಾಂಡೀಸ್, ಕ್ರೀಡಾ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ, ಮಹಮ್ಮದ್ ಹನೀಫ್, ರಾಮಕೃಷ್ಣ ಆಳ್ವ, ಶಿಕ್ಷಕಿ ಶಾಲಿನಿ, ಸತೀಶ್ ಶೆಟ್ಟಿ ಮೊಡಂಕಾಪು, ಹರೀಶ್ ಸಾಲ್ಯಾನ್, ರೋನಿ ಬಂಟ್ವಾಳ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಸುನೀಲ್ ಲೂವಿಸ್ ಮತ್ತು ಶಿಕ್ಷಕ, ತಿಪ್ಪೇ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.


Nk Channel Final 21 09 2023