Bengaluru 24°C
Ad

ಮಾಜಿ ಕ್ಯಾಪ್ಟನ್ ಧೋನಿ ಭಾಯ್ ನನ್ನ ಆರಾಧ್ಯ ಆಟಗಾರ : ರಿಷಬ್ ಪಂತ್

ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ.

ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆ.

ಭಾರತದ ಮಾಜಿ ಕ್ಯಾಪ್ಟನ್ ಧೋನಿ ಕುರಿತು ಅಮೆರಿಕದಲ್ಲಿ  ರಿಷಬ್ ಪಂತ್ ಮಾತನಾಡಿ, ಧೋನಿ ಭಾಯ್ ನನ್ನ ಆರಾಧ್ಯ ಆಟಗಾರ. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ನನಗೆ ಯಾವುದೇ ಸಹಾಯ ಅಥವಾ ಸಲಹೆ ಬೇಕಾದಾಗ ಮಾಹಿ ಭಾಯಿಯನ್ನು ಕೇಳುತ್ತೇನೆ. ಅವರು ಯಾವಾಗಲೂ ನನಗೆ ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು ರೆಡಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ರಿಷಬ್ ಪಂತ್ ಬಗ್ಗೆ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು, ಯಾರ ಬಗ್ಗೆ ಮಾತನಾಡುವುದು ಪಂತ್ ಅವರ ವೈಯಕ್ತಿಕ ವಿಚಾರ. ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡಕ್ಕೆ ರಿಷಬ್ ಪಂತ್ ಅತ್ಯಂತ ಮುಖ್ಯವಾದ ಪ್ಲೇಯರ್ ಆಗಿದ್ದಾರೆ.

ಆಕ್ಸಿಡೆಂಟ್ ಆದ ಮೇಲೆ ಅವರ ಕುಟುಂಬ ಸಾಕಷ್ಟು ನೋವು ಅನುಭವಿಸಿದೆ. ಆದರೆ ಎಲ್ಲವನ್ನು ಗೆದ್ದು ಟೀಮ್​​ಗೆ ಮರಳಿರುವುದು ತುಂಬಾ ಸಂತಸದ ಸುದ್ದಿ. ಇದರಿಂದ ನನಗೆ ಖುಷಿಯಾಗಿದೆ ಎಂದು ಪಂತ್ ಬಗ್ಗೆ ರೋಹಿತ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Ad
Ad
Nk Channel Final 21 09 2023
Ad