ನವದೆಹಲಿ: ಕ್ರಿಸ್ಟಿಯಾನೊ ರೊನಾಲ್ಡೊ ಈಗ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಒಳಗೊಂಡಂತೆ 1 ಬಿಲಿಯನ್ಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ತನ್ನ ಯೂಟ್ಯೂಬ್ ಚಾನೆಲ್ “ಯುಆರ್ ಕ್ರಿಸ್ಟಿಯಾನೊ” ಅನ್ನು ಪ್ರಾರಂಭಿಸಿದರು, ಇದು ಕೇವಲ ಒಂದು ವಾರದಲ್ಲಿ 50 ಮಿಲಿಯನ್ ಅನುಯಾಯಿಗಳನ್ನು ತಲುಪಿದ ದಾಖಲೆಯನ್ನು ಮುರಿದಿತ್ತು.
ರೊನಾಲ್ಡೊ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇವರು ಇನ್ಸ್ಟಾಗ್ರಾಮ್ನಲ್ಲಿ 639 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಫೇಸ್ ಬುಕ್ ನಲ್ಲಿ 170 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ 113 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ರೊನಾಲ್ಡೊ ಚೀನಾದ ಪ್ಲಾಟ್ಫಾರ್ಮ್ಗಳಾದ ಕುವೈಶೌ ಮತ್ತು ವೀಬೊದಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ.
Ad