ತಿ. ನರಸೀಪುರ: ಖೋ ಖೋ ವಿಶ್ವಕಪ್ ಗೆಲುವಿನ ಬಳಿಕ ಚೈತ್ರಾ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮಕ್ಕೆ ಆಗಮಿಸಿದ್ದಾರೆ.
ಹುಟ್ಟೂರಿಗೆ ಆಗಮಿಸಿದ ಚೈತ್ರಾರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಗ್ರಾಮಸ್ಥರು ಮತ್ತು ಚೈತ್ರಾ ವಿದ್ಯಾಭ್ಯಾಸ ಮಾಡಿದ ಶಾಲೆ ವತಿಯಿಂದ ಅದ್ದೂರಿ ಸ್ವಾಗತಿಸಿದರು.
ಶಾಲೆ ವತಿಯಿಂದ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಯಿತು. ಚೈತ್ರಾರನ್ನ ಸನ್ಮಾನಿಸಿ ಶಾಲಾ ಸಿಬ್ಬಂದಿ, ವಿವಿಧ ಮಠದೀಶರು ಗೌರವಿಸಿದರು.