ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ್ದರ ವಿರುದ್ಧವಾಗಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಇದೀಗ ವಿನೇಶ್ ಅವರ ಮೇಲ್ಮನವಿ ವಿಚಾರಣೆಯ ಗಡುವನ್ನು ಆಗಸ್ಟ್ 11 ರವರೆಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಿಸ್ತರಿಸಿದೆ. ವಾಸ್ತವವಾಗಿ ವಿನೇಶ್ ಅವರ ಮೇಲ್ಮನವಿಯ ತೀರ್ಪು ಇಂದೇ ಬರಬೇಕಿತ್ತು. ಆದರೆ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್‌ನ ತಾತ್ಕಾಲಿಕ ವಿಭಾಗದ ಅಧ್ಯಕ್ಷರು ಮುಂದೂಡಿದ್ದಾರೆ.
Ad