Bengaluru 23°C
Ad

ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಗೊಂಡ ಬೋಪಣ್ಣ-ಮ್ಯಾಥ್ಯೂ ಜೋಡಿ

ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್‌ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ಕಠಿಣ ಹೋರಾಟದ ಬಳಿಕ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್​ನಲ್ಲಿ ಸಿಮೋನ್ ಬೊಲೆಲಿ- ಆಂಡ್ರಿಯಾ ವವಸ್ಸೋರಿ ಜೋಡಿಯ ಸವಾಲು ಎದುರಿಸಲಿದ್ದಾರೆ.

ಪ್ಯಾರಿಸ್​: ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್‌ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ಕಠಿಣ ಹೋರಾಟದ ಬಳಿಕ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್​ನಲ್ಲಿ ಸಿಮೋನ್ ಬೊಲೆಲಿ- ಆಂಡ್ರಿಯಾ ವವಸ್ಸೋರಿ ಜೋಡಿಯ ಸವಾಲು ಎದುರಿಸಲಿದ್ದಾರೆ.

ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬೋಪಣ್ಣ-ಮ್ಯಾಥ್ಯೂ ಜೋಡಿ ಸ್ಯಾಂಡರ್ ಗಿಲ್ಲೆ ಮತ್ತು ಜೊರಾನ್ ವಿಲೆಜೆನ್ ವಿರುದ್ಧ ಮೂರು ಸೆಟ್​​ಗಳ ಸುದೀರ್ಘ ಹೋರಾಟ ನಡೆಸಿ 7-6 (7-3), 5-7, 6-1 ಅಂತರದ ಗೆಲುವು ಸಾಧಿಸಿದರು.

ಮೊದಲ ಸೆಟ್​ ಟ್ರೈಬೇಕರ್​ ಮೂಲಗ ಗೆದ್ದ ಬೋಪಣ್ಣ-ಮ್ಯಾಥ್ಯೂ ಜೋಡಿ ದ್ವಿತೀಯ ಸೆಟ್​ನಲ್ಲಿ ಸೋಲು ಕಂಡರು. ಅಂತಿಮ ಹಾಗೂ ನಿರ್ಣಾಯಕ ಸೆಟ್​ನಲ್ಲಿ ಶ್ರೇಷ್ಠ ಆಟವಾಡಿದ ಬೋಪಣ್ಣ ಮತ್ತು ಮ್ಯಾಥ್ಯೂ ಎದುರಾಳಿಗೆ ಕೇವಲ ಒಂದು ಸೆಟ್​ ಮಾತ್ರ ಬಿಟ್ಟುಕೊಟ್ಟು ಭರ್ಜರಿ ಗೆಲುವು ಸಾಧಿಸಿದರು.

Ad
Ad
Nk Channel Final 21 09 2023
Ad