Bengaluru 21°C
Ad

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅತಿದೊಡ್ಡ ಅವಮಾನ : ಕಮ್ರಾನ್ ಅಕ್ಮಲ್

2024 ರ ಟಿ 20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿರುದ್ಧ ಸೋತ ನಂತರ ಪಾಕಿಸ್ತಾನ ತಂಡಕ್ಕೆ ಮುಖಭಂಗವಾಗಿದೆ.

ನವದೆಹಲಿ: 2024 ರ ಟಿ 20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿರುದ್ಧ ಸೋತ ನಂತರ ಪಾಕಿಸ್ತಾನ ತಂಡಕ್ಕೆ ಮುಖಭಂಗವಾಗಿದೆ. ಸೂಪರ್ ಓವರ್​ನಲ್ಲಿ ಸೋಲು ಕಂಡಿರುವುದು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ “ಅತಿದೊಡ್ಡ” ಅವಮಾನ ಎಂದು ಕಮ್ರಾನ್ ಅಕ್ಮಲ್ ಬಣ್ಣಿಸಿದ್ದಾರೆ.

Ad

ಡಲ್ಲಾಸ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಮೆರಿಕ ತಂಡ ಪಾಕಿಸ್ತಾನವನ್ನು ಮಣಿಸಿದೆ. ತವರು ತಂಡವು ಪಂದ್ಯದುದ್ದಕ್ಕೂ ಎಲ್ಲಾ ಮೂರು ವಿಭಾಗಗಳಲ್ಲಿ ಪಾಕಿಸ್ತಾನ ತಂಡವನ್ನು ಮೀರಿಸಿತು. ಸೂಪರ್ ಓವರ್​ನಲ್ಲಿ 19 ರನ್​ಗಲ ಸವಾಲು ಮೀರಲು ಪಾಕ್​ ತಂಡಕ್ಕೆ ಸಾಧ್ಯವಾಗಲಿಲ್ಲ.

Ad

ತಮ್ಮ ಯೂಟ್ಯೂಬ್ ಚಾನೆಲ್​ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಮ್ರಾನ್ ಅಕ್ಮಲ್ ಯುಎಸ್ಎ ಅವರ ಅಸಾಧಾರಣ ಪ್ರದರ್ಶನವನ್ನು ಶ್ಲಾಘಿಸಿದರು. ಅವರು ಉನ್ನತ ಶ್ರೇಯಾಂಕದ ತಂಡದಂತೆ ಆಡಿದರು ಎಂದು ಹೇಳಿದರು. ಪಾಕಿಸ್ತಾನಕ್ಕಿಂತ ಉತ್ತಮ ಕ್ರಿಕೆಟ್ ಆಡಿದ್ದರಿಂದ ಯುಎಸ್ಎ ಗೆಲ್ಲಲು ಅರ್ಹವಾಗಿದೆ ಎಂದು ಮಾಜಿ ಕ್ರಿಕೆಟಿಗ ಹೇಳಿದರು.

Ad

ಸೂಪರ್ ಓವರ್​ನಲ್ಲಿ ಪಂದ್ಯವನ್ನು ಕಳೆದುಕೊಂಡಿರುವುದು ಪಾಕಿಸ್ತಾನ ಕ್ರಿಕೆಟ್​ಗೆ ದೊಡ್ಡ ಅವಮಾನವಾಗಿದೆ. ಇದಕ್ಕಿಂತ ದೊಡ್ಡ ಅವಮಾನ ಇರಲು ಸಾಧ್ಯವಿಲ್ಲ. ಯುಎಸ್ಎ ಅಸಾಧಾರಣವಾಗಿ ಉತ್ತಮವಾಗಿ ಆಡಿತು. ಅವರು ಕೆಳ ಶ್ರೇಯಾಂಕದ ತಂಡವೆಂದು ಭಾವಿಸಲಿಲ್ಲ. ಅವರು ಪಾಕಿಸ್ತಾನಕ್ಕಿಂತ ಮೇಲಿದ್ದಾರೆ ಎಂದು ಅನಿಸಿತು. ಅದು ಅವರು ತೋರಿಸಿದ ಪ್ರಬುದ್ಧತೆಯ ಮಟ್ಟ ಉತ್ತಮವಾಗಿತ್ತು  ಎಂದು ಅಕ್ಮಲ್ ಹೇಳಿದ್ದಾರೆ.

Ad

 

 

Ad
Ad
Nk Channel Final 21 09 2023