Bengaluru 22°C
Ad

ಪ್ಯಾರಿಸ್‌ ಒಲಂಪಿಕ್‌ಗೆ ಅರ್ಹತೆ ಪಡೆದ ಭೂಪಣ್ಣ ಮತ್ತು ಸುಮಿತ್‌ ನಾಗಲ್‌

ಭಾರತದ ಹಿರಿಯ ಟೆನಿಸ್​ ಆಟಗಾರ ರೋಹನ್‌ ಬೋಪಣ್ಣ ಮತ್ತು ಸುಮಿತ್‌ ನಾಗಲ್‌ ಮುಂದಿನ ತಿಂಗಳು ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ನವದೆಹಲಿ: ಭಾರತದ ಹಿರಿಯ ಟೆನಿಸ್​ ಆಟಗಾರ ರೋಹನ್‌ ಬೋಪಣ್ಣ ಮತ್ತು ಸುಮಿತ್‌ ನಾಗಲ್‌ ಮುಂದಿನ ತಿಂಗಳು ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಇಬ್ಬರ ನೂತನ ಎಟಿಪಿ ರ್ಯಾಂಕಿಗ್‌ ನಲ್ಲಿ ಸುಮಿತ್‌ 18 ಸ್ಥಾನ ಮೇಲೇರಿ 77ನೇ ರ್‍ಯಾಂಕಿಂಗ್‌ ಪಡೆದ ಕಾರಣ ಅವರಿಗೆ ಒಲಿಂಪಿಕ್ಸ್‌ ಅರ್ಹತೆ ಲಭಿಸಿದೆ.

ಭಾನುವಾರ ಜರ್ಮನಜಿಯಲ್ಲಿ ನಡೆದ ಹೀಲ್‌ಬ್ರಾನ್ ನೆಕರ್‌ಕಪ್‌ ಚಾಲೆಂಜರ್‌ ಫೈನಲ್​ನಲ್ಲಿ ಸುಮಿತ್‌ ಉತ್ತಮ ಪ್ರದರ್ಶನ ನಿಡಿದ್ದು ಎಚ್ಚಿನ ಅಂಕ ಪಡೆದಿದ್ದರು. ಇದರಿಂದ ಸುಮಿತ್‌ ರ್‍ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಕಂಡುಬಂದಿತ್ತು. ಈ ಮೂಲಕ ಒಲಂಪಿಕ್ಸ್‌ ಟಿಕೆಟ್‌ ಕೂಡ ಗಿಟ್ಟಿಸಿಕೊಂಡಿದ್ದಾರೆ.

ವಯಸ್ಸು 40 ದಾಟಿದರೂ ಕೂಡ ಯುವ ಆಟಗಾರರು ಕೂಡ ನಾಚುವಂತ ಪ್ರದರ್ಶನ ತೋರುತ್ತಿರುವ ಕನ್ನಡಿಗ ಬೋಪಣ್ಣ ಕೂಡ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

Ad
Ad
Nk Channel Final 21 09 2023
Ad