Bengaluru 22°C
Ad

ವಿರಾಟ್​ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಬಿಸಿಸಿಐ

Vk

ಮುಂಬೈ: ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಶುರುವಾಗಿದೆ. ಹೇಗಾದ್ರೂ ಮಾಡಿ ಈ ಬಾರಿ ಗೆದ್ದು ಐಸಿಸಿ ಟಿ20 ವಿಶ್ವಕಪ್​​ ಪ್ರಶಸ್ತಿ ಎತ್ತಿ ಹಿಡಿಯಲೇಬೇಕು ಎಂದು ಟೀಮ್​ ಇಂಡಿಯಾ ಜಿದ್ದಿಗೆ ಬಿದ್ದಿದೆ. ಈ ಮಧ್ಯೆ ಟೀಮ್​ ಇಂಡಿಯಾದ ಪರ ಕ್ಯಾಪ್ಟನ್​ ರೋಹಿತ್​ ಶರ್ಮಾ ಜತೆ ಓಪನಿಂಗ್​ ಮಾಡೋದ್ಯಾರು? ಅನ್ನೋ ಚರ್ಚೆ ಶುರುವಾಗಿದೆ.

ಮೂಲಗಳ ಪ್ರಕಾರ ರೋಹಿತ್​ ಶರ್ಮಾ ಓಪನಿಂಗ್​ ಮಾಡುವುದು ಯಶಸ್ವಿ ಜೈಸ್ವಾಲ್ ಎಂದು ಹೇಳಲಾಗಿತ್ತು. ಆದರೆ, ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್​​ನಲ್ಲಿರೋದು ಈ ಬಗ್ಗೆ ಚರ್ಚೆ ಹುಟ್ಟಿಹಾಕಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿ ಒಬ್ಬರು ಅಧಿಕೃತ ಮಾಹಿತಿ ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್ ಆರಂಭಿಕ ಬ್ಯಾಟರ್ ಎಂಬುದು ನಿಜ. ಆದರೆ, ಕೊಹ್ಲಿ ಫಾರ್ಮ್​ನಲ್ಲಿದ್ದಾರೆ. ಅದರಲ್ಲೂ ಐಪಿಎಲ್​ನಲ್ಲಿ ಆರಂಭಿಕನಾಗಿ ಆಕ್ರಮಣಕಾರಿ ವಿಧಾನದಲ್ಲಿ ಬ್ಯಾಟ್ ಬೀಸಿದ್ದಾರೆ ಕೊಹ್ಲಿ. ಹಾಗಾಗಿ ಕೊಹ್ಲಿ ಓಪನಿಂಗ್​ ಬ್ಯಾಟರ್​​ ಆದ್ರೆ ಒಳ್ಳೆ ಇನ್ನಿಂಗ್ಸ್​ ಕಟ್ಟಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಕೊಹ್ಲಿ, ರೋಹಿತ್​ ಇಬ್ಬರು ಓಪನಿಂಗ್​ ಮಾಡಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Ad
Ad
Nk Channel Final 21 09 2023
Ad