ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ ಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸನಲ್ಲಿ ಈ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ.
“ಇಂದು, ನಮ್ಮ ಅತ್ಯಂತ ಪ್ರೀತಿಪಾತ್ರರೊಂದಿಗೆ, ನಾವು ಮನೆಯಲ್ಲಿ ಮದುವೆಯಾಗಿದ್ದೇವೆ, ಅದು ನಮಗೆ ಅಪಾರ ಸಂತೋಷ ಮತ್ತು ಪ್ರಶಾಂತತೆಯನ್ನು ನೀಡಿದೆ. ಕೃತಜ್ಞತೆ ಮತ್ತು ಪ್ರೀತಿಯಿಂದ ತುಂಬಿದ ಹೃದಯದೊಂದಿಗೆ, ಒಗ್ಗಟ್ಟಿನ ಈ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ” ಎಂದು ಅಥಿಯಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ನವವಿವಾಹಿತ ದಂಪತಿಗಳ ಚಿತ್ರಗಳೊಂದಿಗೆ ಬರೆದಿದ್ದಾರೆ.
ಸಮಾರಂಭ ಮುಗಿದ ನಂತರ, ಸುನೀಲ್ ಶೆಟ್ಟಿ ಮತ್ತು ಅವರ ಮಗ ಅಹಾನ್ ಸ್ಥಳದಿಂದ ಹೊರಬಂದು, ಮಾಧ್ಯಮಗಳನ್ನು ಸ್ವಾಗತಿಸಿದರು ಮತ್ತು ಸಿಹಿತಿಂಡಿಗಳನ್ನು ವಿತರಿಸಿದರು.
ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಸುನೀಲ್ ಶೆಟ್ಟಿ, ಸಮಾರಂಭವು ನಿಜವಾಗಿಯೂ ಉತ್ತಮವಾಗಿ ನಡೆದಿದ್ದರಿಂದ ತುಂಬಾ ಸಂತೋಷವಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ತನ್ನ ಮಗಳು ಅಥಿಯಾಗೆ ತಂದೆಯಾಗಿರುವಂತೆಯೇ ತಾನು ರಾಹುಲ್ ಗೆ ತಂದೆಯಾಗಿದ್ದೇನೆ ಎಂದು ಶೆಟ್ಟಿ ಹೇಳಿದರು. ‘ಅಳಿಯ’ ವಿಷಯವು ಗತಕಾಲಕ್ಕೆ ಸೇರಿದೆ ಎಂದು ಅವರು ಹೇಳಿದರು.