ಹ್ಯಾಂಗ್ಝೌ: ಮಳೆಯಿಂದಾಗಿ ಪಂದ್ಯ ರದ್ದಾದ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ ಲಭಿಸಿದೆ. ಅಫ್ಘಾನಿಸ್ತಾನಕ್ಕಿಂತ ಉತ್ತಮ ಅಂತರರಾಷ್ಟ್ರೀಯ ಶ್ರೇಯಾಂಕದಿಂದಾಗಿ ಭಾರತ ಚಿನ್ನ ಗೆದ್ದಿದೆ.
ಇನ್ನು ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್ 2023ರ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್’ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಚಂದ್ರಶೇಖರ್ ಶೆಟ್ಟಿ ಕೊರಿಯಾವನ್ನ ಸೋಲಿಸಿ ಚಿನ್ನ ಪದಕ ಪದಕ ಗೆದ್ದಿದ್ದಾರೆ.ಏಷ್ಯನ್ ಗೇಮ್ಸ್ 2023ರ 14ನೇ ದಿನವಾದ ಇಂದು ಭಾರತದ ಪದಕಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಭಾರತದ ಬಿಲ್ಲುಗಾರಿಕೆ ತಂಡವು ಎರಡು ಚಿನ್ನದ ಪದಕಗಳನ್ನ ಗೆದ್ದರೆ, ಜ್ಯೋತಿ ಸುರೇಖಾ, ಓಜಾಸ್ ಪ್ರವೀಣ್ ಡಿಯೋಟಾಲೆ ಕ್ರಮವಾಗಿ ಮಹಿಳಾ, ಪುರುಷರ ಕಾಂಪೌಂಡ್ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದರು.