Bengaluru 22°C
Ad

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಇಂದು ಭಾರತ – ದಕ್ಷಿಣ ಕೊರಿಯಾ ಸೆಮೀಸ್

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಸೋಮವಾರ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಸವಾಲನ್ನು ಎದುರಿಸಲಿದೆ. ರೌಂಡ್ ರಾಬಿನ್ ಹಂತದಲ್ಲಿ ಸತತ 5 ಪಂದ್ಯ ಗಳನ್ನು ಗೆದ್ದಿರುವ ಭಾರತ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದು ತನ್ನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.

ಚೀನಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಸೋಮವಾರ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಸವಾಲನ್ನು ಎದುರಿಸಲಿದೆ. ರೌಂಡ್ ರಾಬಿನ್ ಹಂತದಲ್ಲಿ ಸತತ 5 ಪಂದ್ಯ ಗಳನ್ನು ಗೆದ್ದಿರುವ ಭಾರತ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದು ತನ್ನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ, ಚೀನಾ ವಿರುದ್ಧ 3-0 ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿತ್ತು. ಬಳಿಕ ಜಪಾನ್ ಹಾಗೂ ಮಲೇಷ್ಯಾ ತಂಡಗಳನ್ನು ಕ್ರಮವಾಗಿ 5-1, 8-1 ಗೋಲುಗಳಿಂದ ಮಣಿಸಿತ್ತು. ಅನಂತರ  ದಕ್ಷಿಣ ಕೊರಿಯಾವನ್ನು 3-1ರಲ್ಲಿ ಸೋಲಿಸಿದ್ದ ಭಾರತ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು 2-1 ಗೋಲುಗಳಲ್ಲಿ ಮಣಿಸಿ ಅಜೇಯವಾಗಿ ಉಳಿದಿತ್ತು. ಪ್ರತಿ ಪಂದ್ಯದಲ್ಲೂ ಭಾರತ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು, ಎದುರಾಳಿಗಳ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದೆ.

Ad
Ad
Nk Channel Final 21 09 2023