Bengaluru 23°C
Ad

ರಾಷ್ಟ್ರಮಟ್ಟದ ಚೆಸ್ ಪಂದ್ಯದಲ್ಲಿ ಮಿಂಚಿದ ಅಂಬಿಕಾದ ವಿದ್ಯಾರ್ಥಿಗಳು

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ವಿದ್ಯಾಭಾರತಿಯ ವತಿಯಿಂದ ಬಿಹಾರದ ಸರಸ್ವತಿ ವಿದ್ಯಾಮಂದಿರದಲ್ಲಿ ಅಕ್ಟೋಬರ ಒಂದರಿಂದ ಐದರ ತನಕ ನಡೆದ ರಾಷ್ಟçಮಟ್ಟದ ಚೆಸ್ ಪಂದ್ಯದಲ್ಲಿ ತೃತೀಯ ಸ್ಥಾನ ಗಳಿಸಿ ಕೀರ್ತಿ ತಂದಿರುತ್ತಾರೆ.

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ವಿದ್ಯಾಭಾರತಿಯ ವತಿಯಿಂದ ಬಿಹಾರದ ಸರಸ್ವತಿ ವಿದ್ಯಾಮಂದಿರದಲ್ಲಿ ಅಕ್ಟೋಬರ ಒಂದರಿಂದ ಐದರ ತನಕ ನಡೆದ ರಾಷ್ಟ್ರಮಟ್ಟದ ಚೆಸ್ ಪಂದ್ಯದಲ್ಲಿ ತೃತೀಯ ಸ್ಥಾನ ಗಳಿಸಿ ಕೀರ್ತಿ ತಂದಿರುತ್ತಾರೆ.

ಪುತ್ತೂರು ಹಾರಾಡಿಯ ದಾಮೋದರ ಎನ್ ಮತ್ತು ನವೀನ ಕುಮಾರಿ ಕೆ ಎಸ್ ದಂಪತಿ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ತ್ರಿಶೂಲ್ ಎನ್. ಡಿ., ನೇರಳಕಟ್ಟೆಯ ಸತ್ಯಶಂಕರ ಪಿ ಎಮ್ ಮತ್ತು ಶ್ವೇತಾ ಕೆ ದಂಪತಿ ಪುತ್ರ ಪ್ರಥಮ ಪಿಯುಸಿ ವಿದ್ಯಾರ್ಥಿ ಅಶ್ವಿನ್ ಪಿ ಎಸ್. ಹಾಗೂ ಪುತ್ತೂರು ನೆಹರುನಗರದ ರೋಹಿತಾಕ್ಷ ಕೆ ಮತ್ತು ಆರತಿ ರೈ ದಂಪತಿ ಪುತ್ರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಕ್ಷಯ ರೈ ಈ ಸಾಧನೆಗೈದಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿದ ತಂಡದ ಐವರು ಸ್ಪರ್ಧಿಗಳಲ್ಲಿ ಮೂವರು ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳೆಂಬುದು ಗಮನಾರ್ಹ.

Ad
Ad
Nk Channel Final 21 09 2023