Bengaluru 21°C
Ad

ಮಿನಿ ಒಲಂಪಿಕ್ಸ್ ನ ಓಟದಲ್ಲಿ ಅಜಯ್ ಪೃಥ್ವಿರಾಜ್ ಚಾಂಪಿಯನ್

ಬೆಂಗಳೂರಿನಲ್ಲಿ ನಡೆದ ೩ನೇ ಆವೃತ್ತಿಯ ರಾಜ್ಯ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ವಿದ್ಯಾರ್ಥಿ ಅಜಯ್ ಪೃಥ್ವಿರಾಜ್ ಪಾಲ್ಗೊಂಡು ವಿಜೇತರಾಗಿ ಗಮನಸೆಳೆದಿದ್ದರಾರೆ.

ಮೈಸೂರು: ಬೆಂಗಳೂರಿನಲ್ಲಿ ನಡೆದ ೩ನೇ ಆವೃತ್ತಿಯ ರಾಜ್ಯ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ವಿದ್ಯಾರ್ಥಿ ಅಜಯ್ ಪೃಥ್ವಿರಾಜ್ ಪಾಲ್ಗೊಂಡು ವಿಜೇತರಾಗಿ ಗಮನಸೆಳೆದಿದ್ದರಾರೆ.

Ad

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಓಟದ ಸ್ಪರ್ಧೆ ಯಲ್ಲಿ ಪಾಲ್ಗೊಂಡ ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಂ.ಎಲ್. ಅಜಯ್ ಪೃಥ್ವಿರಾಜ್ 400 ಮತ್ತು 600 ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಪದಕ ಪಡೆದಿದ್ದಾರೆ.

Ad

ರಾಜ್ಯ, ರಾಷ್ಟ್ರೀಯ ಓಟದ ಸ್ಪರ್ಧೆ ಹಾಗೂ ಇನ್ನಿತರೆ ಕ್ರೀಡಾ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು ಪ್ರಥಮ ಸ್ಥಾನಕ್ಕೆ ಭಾಜನರಾಗಿರುವ ಅಜಯ್ ಪೃಥ್ವಿರಾಜ್, ಇದೀಗ ರಾಜ್ಯ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲೂ ಪ್ರಥಮ ಸ್ಥಾನ ಪಡೆದು, ಯಶಸ್ಸು ಸಾಧಿಸಿದ್ದಾರೆ. ಗಾಯತ್ರಿಪುರಂ ನಿವಾಸಿ ಹಾಗೂ ರಾಜ್ ಬ್ಯಾಗ್ಸ್ ಮಾಲೀಕ ಎಂ.ಲಿಂಗರಾಜು ಮತ್ತು ಸಂಗೀತಾ ದಂಪತಿ ಮಗನಾದ ಅಜಯ್ ಪೃಥ್ವಿರಾಜ್,

Ad

ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ 15 ವರ್ಷ ದೊಳ ಗಿನವರ 200 ಮೀಟರ್ ಮತ್ತು 400 ಮೀಟರ್ ಓಟದ ಹಲವು ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸಿ, ಎರಡೂ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದಿದ್ದರು. ಅಂತಾರಾಷ್ಟ್ರೀಯ ಅಥ್ಲೀಟ್ ರೀನಾ ಜಾರ್ಜ್ ಈ ವಿದ್ಯಾರ್ಥಿಯ ತರಬೇತುದಾರರಾಗಿದ್ದು, ಈತನ ಸಾಧನೆಗೆ ಶಾಲಾ ಆಡಳಿತ ಮಂಡ ಳಿಯವರು, ಪೋಷಕರು ಮತ್ತು ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ.

Ad
Ad
Ad
Nk Channel Final 21 09 2023