Bengaluru 29°C
Ad

ಭಾರತ-ಪಾಕ್ ಪಂದ್ಯದ ವೇಳೆ ‘ಇಮ್ರಾನ್ ಖಾನ್‌ನನ್ನು ಬಿಡುಗಡೆ ಮಾಡಿ’ ಸಂದೇಶ ಹೊತ್ತು ಹಾರಿದ ವಿಮಾನ

ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ 'ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಿ' ಎಂಬ ಸಂದೇಶವನ್ನು
ನ್ಯೂಯಾರ್ಕ್:  ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ 'ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಿ' ಎಂಬ ಸಂದೇಶವನ್ನು ಹೊತ್ತ ವಿಮಾನವೊಂದು ಕ್ರೀಡಾಂಗಣದ ಮೇಲೆ ಕಾಣಿಸಿಕೊಂಡಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಘಟನೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದು, 'ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಿ' ಎಂದು ಶೀರ್ಷಿಕೆ ನೀಡಿದೆ.
2018 ರಿಂದ 2022 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಖಾನ್ (71) ಅವರು 2023 ರ ಆಗಸ್ಟ್‌ನಿಂದ ಅಡಿಯಾಲಾ ಜೈಲಿನಲ್ಲಿ ತೋಷಖಾನಾ ಪ್ರಕರಣ, ಸೈಫರ್ ಕೇಸ್ ಮತ್ತು ಅಇಸ್ಲಾಮಿಕ್ ವಿವಾಹ ಪ್ರಕರಣ ಸೇರಿದಂತೆ ಹಲವು ಆರೋಪಗಳ ಮೇಲೆ ಬಂಧಿಯಾಗಿದ್ದಾರೆ. ಇಮ್ರಾನ್ ಖಾನ್ 1992 ರಲ್ಲಿ ದೇಶವು ಗೆದ್ದ ಏಕೈಕ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಗೆಲುವಿನತ್ತ ಮುನ್ನಡೆಸಿದರು ಎಂಬುದು ಗಮನಿಸಬೇಕಾದ ಸಂಗತಿ.
 
Ad
Ad
Nk Channel Final 21 09 2023
Ad