Ad

‘ಒಲಿಂಪಿಕ್‌ ಆರ್ಡರ್‌’ ಗೌರವ ಸ್ವೀಕರಿಸಿದ ಅಭಿನವ್‌ ಬಿಂದ್ರಾ

2008ರ ಬೀಜಿಂಗ್‌ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಭಾರತಕ್ಕೆ ಮೊದಲ ವೈಯಕ್ತಿಕ ಒಲಿಂಪಿಕ್‌ ಪದಕ ಗೆದ್ದ ಅಭಿನವ್‌ ಬಿಂದ್ರಾ ಅವರು ‘ಒಲಿಂಪಿಕ್‌ ಆರ್ಡರ್‌’  ಗೌರವ ಸ್ವೀಕರಿಸಿದ್ದಾರೆ. ಶನಿವಾರ ರಾತ್ರಿ ನಡೆದಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ 142 ನೇ ಅಧಿವೇಶನದಲ್ಲಿ ಬಿಂದ್ರಾಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ನವದೆಹಲಿ: 2008ರ ಬೀಜಿಂಗ್‌ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಭಾರತಕ್ಕೆ ಮೊದಲ ವೈಯಕ್ತಿಕ ಒಲಿಂಪಿಕ್‌ ಪದಕ ಗೆದ್ದ ಅಭಿನವ್‌ ಬಿಂದ್ರಾ ಅವರು ‘ಒಲಿಂಪಿಕ್‌ ಆರ್ಡರ್‌’  ಗೌರವ ಸ್ವೀಕರಿಸಿದ್ದಾರೆ. ಶನಿವಾರ ರಾತ್ರಿ ನಡೆದಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ 142 ನೇ ಅಧಿವೇಶನದಲ್ಲಿ ಬಿಂದ್ರಾಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

41 ವರ್ಷ ವಯಸ್ಸಿನ ಅಭಿನವ್ ಬಿಂದ್ರಾ 2008ರ ಬೀಜಿಂಗ್ ಕ್ರೀಡೆಗಳಲ್ಲಿ ಅವರು ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಅವರು 2010 ರಿಂದ 2020ರವರೆಗೆ ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್‌ ಫೆಡರೇಷನ್‌ನ ಅಥ್ಲೀಟ್ಸ್ ಸಮಿತಿ ಸದಸ್ಯರಾಗಿದ್ದರು. 2014ರಲ್ಲಿ ಅಧ್ಯಕ್ಷರೆ ವಹಿಸಿದ್ದರು. 2018ರಿಂದ ಅವರು ಐಒಸಿ ಅಥ್ಲೀಟ್ಸ್‌ ಕಮಿಷನ್ ಸದಸ್ಯರಾಗಿದ್ದಾರೆ.

Ad
Ad
Nk Channel Final 21 09 2023