ಒಲಿಂಪಿಕ್ಸ್ 2024 ರಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನುಗೆ ಪದಕ ಕೈತಪ್ಪಿದೆ. ಬಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾ ಬಾಯಿ ಚಾನು ಈ ಬಾರಿ 4 ನೇ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು 49 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಒಟ್ಟು 199 ಕೆ.ಜಿ ಭಾರವನ್ನು ಎತ್ತುವ ಮೂಲಕ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಭಾರತಕ್ಕೆ ಮತ್ತೊಂದು ಪದಕ ಸ್ವಲ್ಪದರಲ್ಲೇ ಕೈತಪ್ಪಿದೆ ಎಂದು ತಿಳಿದು ಬಂದಿದೆ.
ಚೀನಾ ವೇಟ್ ಲಿಫ್ಟರ್‌ಗೆ ಬಂಗಾರ ಚೀನಾದ ವೇಟ್ ಲಿಫ್ಟರ್ ಜಿ ಹಿ ಹೌ ಅವರು ನೂತನ ಒಲಿಂಪಿಕ್ಸ್ ದಾಖಲೆಯನ್ನು ಬರೆದರು. ಇವರು ಸ್ನ್ಯಾಷ್ ಒಟ್ಟು 89 ಎತ್ತಿದ್ದರು. ಅಲ್ಲದೆ ಇವರು ಕ್ಲೀನ್ ಆಂಡ್ ಜರ್ಕ್‌ನಲ್ಲಿ 117 ಕೆ.ಜಿ ಭಾರವನ್ನು ಎತ್ತಿ ನೂತನ ದಾಖಲೆಯನ್ನು ನಿರ್ಮಿಸಿದರು.
Ad