ಹುಬ್ಬಳ್ಳಿ: ವಾಣಿಜ್ಯ ನಗರದ ಜನರು ಒಂದಿಲ್ಲೊಂದು ಸಾಧನೆ ಮಾಡಿ ಹೆಸರು ಮಾಡಿದ್ದಾರೆ. ಅದರಲ್ಲೂ ಕುಸ್ತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ನಮ್ಮ ಹುಬ್ಬಳ್ಳಿಯ ಮೂರು ವಿದ್ಯಾರ್ಥಿಗಳು ದೆಹಲಿ ಸ್ಪೋರ್ಟ್ಸ್ ಅಕಾಡೆಮಿಗೆ ಆಯ್ಕೆಯಾಗಿದ್ದಾರೆ.
ಭಾರತ ದೇಶದ ಕೀರ್ತಿ ಪತಾಕಿಯನ್ನು ಹಾರಿಸಲು ಸಜ್ಜಾಗುತ್ತಿರುವ ಈ ಮೂರು ವಿದ್ಯಾರ್ಥಿಗಳು, ಹುಬ್ಬಳ್ಳಿಯ ಉಣಕಲ್‌ನ ಸರೋಜಾ ಅಶೋಕ ಚಿಲ್ಲಣ್ಣವರ ಮತ್ತು ಧಾರವಾಡದ ರಾಹುಲ ಚವ್ಹಾಣ, ಗಂಗೋತ್ರಿ ಚವ್ಹಾಣ ಈ ಮೂರು ವಿದ್ಯಾರ್ಥಿಗಳು ದೆಹಲಿ ಸ್ಪೋರ್ಟ್ಸ್ ಅಕಾಡೆಮಿಗೆ ಆಯ್ಕೆಯಾಗಿದ್ದಾರೆ.
ಉಣಕಲ್‌ನ ವಾಯುಪುತ್ರ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಕುಸ್ತಿಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಕುಸ್ತಿಯಲ್ಲಿ ಸಾಧನೆ ಮಾಡಿದ ಈ ಮೂರು ವಿದ್ಯಾರ್ಥಿಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಯಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ.
ದೆಹಲಿ ಸ್ಫೋರ್ಟ್ಸ್ ಯುನಿವರ್ಸಿಟಿಯಲ್ಲಿ ಓದುವ ವಿದ್ಯಾರ್ಥಿಗಳನ್ನು ಒಲಿಪಿಂಕ್‌ಗೆ ಸಜ್ಜುಗೊಳಿಸಲಾಗುತ್ತದೆ. ಕುಸ್ತಿಯಲ್ಲಿ ಅದಾಗಲೇ ಹೆಸರು ಮಾಡಿರುವ ಧಾರವಾಡ ಈ ಮೂವರು ಗ್ರಾಮೀಣ ಪ್ರತಿಭೆಗಳು ದೇಶವನ್ನು ಪ್ರತಿನಿಧಿಸುವ ಅವಕಾಶ ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿ ಮುಖೇನ ಸಿಕ್ಕಂತಾಗಿದೆಂದು ವಿದ್ಯಾರ್ಥಿಗಳ ಹರ್ಷ ವ್ಯಕ್ತಪಡಿಸಿದರು.