Bengaluru 22°C
Ad

ಮುಂದಿನ ವಾರದಿಂದ ಬಾಂಗ್ಲಾದೇಶದ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಶುರು

ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್​​​ ಸರಣಿ ಮುಕ್ತಾಯ ಹಂತಕ್ಕೆ ಬಂದಿದೆ.

ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್​​​ ಸರಣಿ ಮುಕ್ತಾಯ ಹಂತಕ್ಕೆ ಬಂದಿದೆ. ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಮುಂದಿನ ವಾರದಿಂದ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಹೀಗಾಗಿ ಅಳೆದು ತೂಗಿ ಟೀಮ್​ ಇಂಡಿಯಾ ಬಲಿಷ್ಠ ಟಿ20 ತಂಡವನ್ನು ಪ್ರಕಟ ಮಾಡಲಾಗಿದೆ.

ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್ ನೇತೃತ್ವದ 15 ಸದಸ್ಯರ ಭಾರತ ತಂಡವನ್ನು ಆಯ್ಕೆಗಾರರು ಪ್ರಕಟಿಸಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ ವಿಶ್ರಾಂತಿ ನೀಡಿದ್ದು, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಕೀಪರ್‌ಗಳಾಗಿ ಆಯ್ಕೆ ಮಾಡಲಾಗಿದೆ.

ಇರಾನಿ ಕಪ್‌ನಲ್ಲಿ ನಿರತರಾಗಿರೋ ಋತುರಾಜ್ ಗಾಯಕ್ವಾಡ್​​, ಇಶಾನ್​ ಕಿಶನ್​ಗೂ ಅವಕಾಶ ನೀಡಿಲ್ಲ. ಟೆಸ್ಟ್ ಸರಣಿಯಾಡಿರೋ ಶುಭ್ಮನ್​​ ಗಿಲ್​ಗೆ ವಿಶ್ರಾಂತಿ ನೀಡಲಾಗಿದೆ. ಯಶಸ್ವಿ ಜೈಸ್ವಾಲ್ ಬದಲಿಗೆ ಅಭಿಷೇಕ್​ ಶರ್ಮಾ ಅವರನ್ನು ಸೆಲೆಕ್ಟ್​ ಮಾಡಲಾಗಿದೆ.

ಇತ್ತೀಚೆಗೆ ನಡೆದ ದುಲೀಪ್​ ಟ್ರೋಫಿಯಲ್ಲಿ ತನ್ನ ಆಟದ ಮೂಲಕ ಗಮನ ಸೆಳೆದವರು ಗಾಯಕ್ವಾಡ್​​. ಅಷ್ಟೇ ಅಲ್ಲ ಇವರು ಟೀಮ್​ ಇಂಡಿಯಾದ ಬೆಸ್ಟ್​ ಯಂಗ್​ ಬ್ಯಾಟರ್​ ಕೂಡ ಹೌದು. ಆದರೆ, ಪ್ರತಿಸಲ ಗಾಯಕ್ವಾಡ್​ಗೆ ಟೀಮ್​ ಇಂಡಿಯಾದಲ್ಲಿ ಚಾನ್ಸ್​ ಸಿಗಲ್ಲ. ಎಂದಿನಂತೆಯೇ ಈ ಬಾರಿ ಕೂಡ ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಗಾಯಕ್ವಾಡ್​ ಅವರನ್ನು ಆಯ್ಕೆ ಮಾಡಿಲ್ಲ ಎಂದು ಫ್ಯಾನ್ಸ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಟೀಮ್​ ಇಂಡಿಯಾ : ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಾಷಿಂಗ್ಟನ್​ ಸುಂದರ್​​, ಹರ್ಷಿತ್ ರಾಣಾ, ನಿತೀಶ್ ಶರ್ಮಾ ಕುಮಾರ್ ರೆಡ್ಡಿ, ಜಿತೇಶ್ ಶರ್ಮಾ, ಮಯಾಂಕ್​ ಯಾದವ್​​, ವರುಣ್​​ ಚಕ್ರವರ್ತಿ.

Ad
Ad
Nk Channel Final 21 09 2023