News Karnataka Kannada
Thursday, May 02 2024
ಕ್ರೀಡೆ

ವಿರಾಟ್ ಕೋಹ್ಲಿ ಜನ್ಮದಿನ, ಅನುಷ್ಕಾ ಶರ್ಮಾ ಮಾಡಿರುವ ವಿಷ್ ತುಂಬಾನೇ ಸ್ಪೆಷಲ್

Virat Kohli 24082021
Photo Credit :

ಇಂದು ವಿರಾಟ್ ಕೋಹ್ಲಿ ಜನ್ಮದಿನ. ವಿರಾಟ್ ಜನ್ಮದಿನಕ್ಕೆ ಅನುಷ್ಕಾ ಶರ್ಮಾ ಮಾಡಿರುವ ವಿಷ್ ತುಂಬಾನೇ ಸ್ಪೆಷಲ್ ಹಾಗೂ ಕ್ಯೂಟ್ ಆಗಿದೆ. ನಿನ್ನ ಜೀವನಕ್ಕೆ ಯಾವ ಫಿಲ್ಟರ್ ಕೂಡ ಬೇಕಾಗಿಲ್ಲ, ನೀನು ಇರುವುದೇ ಪರ್ಫೆಕ್ಟ್.

ನಿನ್ನಲ್ಲಿರುವಷ್ಟು ಪ್ರಾಮಾಣಿಕತೆಯನ್ನು ನಾನೆಲ್ಲೂ ನೋಡಿಲ್ಲ. ಎಷ್ಟೇ ಕೆಟ್ಟ ಪರಿಸ್ಥಿತಿ ಬಂದರೂ ನಿನ್ನನ್ನು ನೀನು ಸಂಭಾಳಿಸಿ ಮತ್ತೆ ಮಾಮೂಲಾಗುತ್ತೀಯಾ, ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ.

ನೀನು ಶಾಶ್ವತ ಎನ್ನುವ ರೀತಿಯಲ್ಲಿ ಎಲ್ಲವನ್ನೂ ಶ್ರದ್ಧೆಯಿಂದ ಮಾಡುವ ನಿನ್ನ ಗುಣ ನನಗಿಷ್ಟ. ಯಾವ ವಿಷಯಕ್ಕೂ ಹೆದರದ ನೀನು ನನ್ನ ಹೀರೋ, ನಾವು ಈ ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ಒಬ್ಬರ ಬಗ್ಗೆ ಒಬ್ಬರು ಹೇಳಿಕೊಳ್ಳೋದಿಲ್ಲ. ಆದರೆ ಕೆಲವೊಮ್ಮೆ ಜಗತ್ತಿಗೆ ಕೂಗಿ ಹೇಳೋಣ ಎನಿಸುತ್ತದೆ.

ನೀನೆಂಥಾ ಮನುಷ್ಯ ಎಂದು. ನಿನ್ನನ್ನು ನಿಜವಾಗಿಯೂ ಅರ್ಥಮಾಡಿಕೊಂಡವರಿಗೆ ಮಾತ್ರ ನೀನೇನು ಎಂದು ಗೊತ್ತು, ನನ್ನ ಜಗತ್ತಿಗೆ ಹೆಚ್ಚು ಬೆಳಕು ತುಂಬಿ ಎಲ್ಲವನ್ನೂ ಇನ್ನಷ್ಟು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ, ಹಾಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಅನುಷ್ಕಾ ಹೇಳಿದ್ದಾರೆ. ಅನುಷ್ಕಾಳ ಈ ವಿಷ್‌ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು