ಕ್ರೀಡೆ

ಯಾವುದೇ ಆಟಗಾರನ ಫಾರ್ಮ್​​ ಅನ್ನು ಯಾರಿಂದಲೂ ತೀರ್ಮಾನಿಸಲಾಗದು:  ಕೊಹ್ಲಿ

ಕಳಪೆ ಫಾರ್ಮ್​​ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆಗೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬೆಂಬಲ ಸೂಚಿಸಿದ್ದು, ಹೊರಗೆ ನಡೆಯುತ್ತಿರುವ ಚರ್ಚೆಯನ್ನಾಧರಿಸಿ ಯಾವುದೇ ಆಟಗಾರನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರಹಾನೆ ಕಳೆದ ಆಸ್ಟ್ರೇಲಿಯಾ ಪ್ರವಾಸದ ನಂತರ ಲಯ ಕಳೆದುಕೊಂಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಎರಡು ಸರಣಿ ಮತ್ತು ಪ್ರಸ್ತುತ ಕಿವೀಸ್ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹಾಗಾಗಿ, ಮುಂಬೈ ಟೆಸ್ಟ್​ನಿಂದ ಅವರನ್ನು ಗಾಯದ ಕಾರಣ ನೀಡಿ ತಂಡದಿಂದ ಹೊರಗಿಡಲಾಗುತ್ತು.ಆದರೆ, ಈಗಾಗಲೇ ಗಂಭೀರ್​ ಸೇರಿದಂತೆ ಕೆಲವು ಕ್ರಿಕೆಟಿಗರು ರಹಾನೆ ಆಯ್ಕೆಯನ್ನು ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೊಹ್ಲಿ , ಯಾವುದೇ ಆಟಗಾರನ ಫಾರ್ಮ್​​ ಅನ್ನು ಯಾರಿಂದಲೂ ತೀರ್ಮಾನಿಸಲಾಗದು ಎಂದಿದ್ದಾರೆ. ತಂಡ ತಮ್ಮ ಆಟಗಾರರು ಕಠಿಣ ಪರಿಸ್ಥಿತಿಯಲ್ಲಿದ್ದಾಗ ಬೆಂಬಲ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

‘ನಾನು ಅಜಿಂಕ್ಯ ರಹಾನೆ ಫಾರ್ಮ್​ ಅನ್ನು ತೀರ್ಮಾನಿಸಲಾಗಲ್ಲ. ನನ್ನ ಪ್ರಕಾರ ಯಾರಿದಂಲೂ ಸಾಧ್ಯವಿಲ್ಲ. ಯಾವ ಪ್ರದೇಶದಲ್ಲಿ ಉತ್ತಮಗೊಳ್ಳಬೇಕೆಂಬುದು ಆ ಆಟಗಾರನಿಗೆ ಮಾತ್ರ ತಿಳಿದಿರುತ್ತದೆ. ನಾವು ತಂಡ ಹಿಂದೆ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದಾಗ ಆಕರ್ಷಕ ಪ್ರದರ್ಶನ ತೋರಿ ನೆರವಾಗಿದ್ದ ಆಟಗಾರರ ಬೆಂಬಲಕ್ಕೆ ನಿಲ್ಲಬೇಕಿದೆ’ ಎಂದು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿಯ ಮೇಲೆ ಒತ್ತಡವಿದ್ದರೆ, ಜನರು, ಮುಂದೆ ಏನಾಗಲಿದೆ? ಎಂದು ಕೇಳಲಾರಂಭಿಸುತ್ತಾರೆ. ನಾವು ಅಂತಹವರ ಹೇಳಿಕೆಯನ್ನು ಮನರಂಜಿಸಲು ಹೋಗುವುದಿಲ್ಲ. ಆ ಸಮತೋಲನವನ್ನು ನಾವು ಹೊರಗೆ ನಿರೀಕ್ಷಿಸಲು ಸಾಧ್ಯವಿಲ್ಲ. ಉತ್ತಮ ಪ್ರದರ್ಶನ ತೋರಿದಾಗ ಪ್ರಶಂಸಿಸುವ ಜನರೇ , ಎರಡೂ ತಿಂಗಳ ನಂತರ ಆ ಆಟಗಾರನನ್ನು ತಂಡದಿಂದ ಕೈಬಿಡಬೇಕೆನ್ನುತ್ತಾರೆ ಎಂದು ಟೀಂ ಇಂಡಿಯಾ ನಾಯಕ ಹೇಳಿದ್ದಾರೆ.

‘ನಾವು ಯಾವಾಗಲೂ ಹೊರಗಿನ ಮಾತುಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ, ಒಬ್ಬ ಆಟಗಾರನ ಕಠಿಣ ಪರಿಶ್ರಮ ಎಷ್ಟಿರುತ್ತದೆ ಎನ್ನುವುದು ನಮಗೆ ಗೊತ್ತಿರುತ್ತದೆ. ನಾವು ಆ ಆಟಗಾರನಿಗೆ ಬೆಂಬಲಿಸುತ್ತೇವೆ, ಅವನು ರಹಾನೆ ಯಾಗಬಹುದು ಅಥವಾ ಬೇರೆ ಯಾರೇ ಆಗಬಹುದು. ಹೊರಗಿನ ವಾತಾವಾರಣದ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದಿದ್ದಾರೆ.

Sneha Gowda

Recent Posts

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

11 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

39 mins ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

47 mins ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

48 mins ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

57 mins ago

ಕೆಸರು ಗದ್ದೆಯಾದ ತಾಲೂಕು ಆಡಳಿತ ಸೌಧ: ಕೆಲಸಕ್ಕಾಗಿ ಬಂದ ಸಾರ್ವಜನಿಕರ ಪರದಾಟ

ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…

1 hour ago