Categories: ಕ್ರೀಡೆ

ಮೈಸೂರು ಗ್ರಾವೆಲ್ ಫೆಸ್ಟ್ನಲ್ಲಿ ಮಿಂಚಿದ ಬೋಪಯ್ಯ

ಮಡಿಕೇರಿ: ಮೈಸೂರು ಗ್ರಾವೆಲ್ ಫೆಸ್ಟ್-2017ನಲ್ಲಿ ಕೊಡಗಿನ ಯುವ ರ್ಯಾಲಿಪಟು ಕೊಂಗೇಟಿರ ಬೋಪಯ್ಯ ಅವರು ಉತ್ತಮ  ಪ್ರದರ್ಶನ ನೀಡುವ ಮೂಲಕ ಹಲವು ವಿಭಾಗಗಳಲ್ಲಿ ಗೆಲುವನ್ನು ಸಾಧಿಸಿದಲ್ಲದೆ, ಓವರಾಲ್ ಫಾಸ್ಟೆಸ್ಟ್ ಡ್ರೈವರ್ ಆಫ್ ದಿ ಇವೆಂಟ್ ಗೆ ಬಾಜನರಾಗಿದ್ದಾರೆ.

ಮೈಸೂರಿನ ಲಲಿತಮಹಲ್ ಪ್ಯಾಲೇಸ್ನ ಸಮೀಪದ ಮೈದಾನದಲ್ಲಿ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಫ್ ಮೈಸೂರ್ ಆಯೋಜಿಸಿತ್ತು. ರ್ಯಾಲಿಯಲ್ಲಿ 7 ವಿಭಾಗದಲ್ಲಿ ಕರ್ನಾಟಕವಲ್ಲದೆ ಕೇರಳದಿಂದಲೂ 140 ರ್ಯಾಲಿ ಪಟುಗಳು ಭಾಗವಹಿಸಿದ್ದರು.ಕೊಡಗಿನಿಂದ ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ, ಐಚೆಟ್ಟಿರ ನಾಣಯ್ಯ, ಕೊಂಗಂಡ ಗಗನ್ ಕರುಂಬಯ್ಯ, ಡೆನ್ ತಿಮ್ಮಯ್ಯ, ಅಮ್ರತ್ ತಿಮ್ಮಯ್ಯ, ದರ್ಶನ್ ನಾಚಪ್ಪ, ಸೂರಜ್ ಮಂದಣ್ಣ, ಆಶಿಶ್ ಮುತ್ತಪ್ಪ, ಆದಿತ್ಯ ಕೆ.ಎಚ್, ಬಬನ್ಖಾನ್, ಸುಹೇಮ್ ಕಬೀರ್ ಅವರು ಭಾಗವಹಿಸಿದ್ದರು.

ಕೊಂಗೇಟಿರ ಬೋಪಯ್ಯ ಇಂಡಿಯನ್ ಓಪನ್ನಲ್ಲಿ ಹಾಗೂ ಅನ್ ರಿಸ್ಟಿಕ್ಟೆಡ್ ಕ್ಲಾಸ್ನಲ್ಲಿ ಮೊದಲನೇ ಸ್ಥಾನ, 1600ಸಿಸಿಯಲ್ಲಿ ಎರಡನೇ ಸ್ಥಾನ ಹಾಗೂ ಸಮಗ್ರ ವೇಗದ ಡ್ರ್ಐವರ್ ಆಫ್ ದೀ ಇವೆಂಟ್ ಪಡೆದು 1ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿ ಕೊಂಡಿದ್ದಾರೆ.ಸುಹೇಮ್ ಕಬೀರ್ ಎಸುವಿ ಕಾಸ್ ನಲ್ಲಿ 1ನೇ ಸ್ಥಾನ, ಐಚೆಟ್ಟಿರ ನಾಣಯ್ಯ 2ನೇ ಸ್ಥಾನ, ಕೊಂಗಂಡ ಗಗನ್ ಕರುಂಬಯ್ಯ, 3ನೇ ಸ್ಥಾನವನ್ನು, ಹಿರಿಯ ರ್ಯಾಲಿ ಪಟು ಡೆನ್ ತಿಮ್ಮಯ್ಯಇಂಡಿಯನ್ ಓಪನ್ ನಲ್ಲಿ 3ನೇ ಸ್ಥಾನ, ಬಬನ್ಖಾನ್ 1100ಯವರೆಗೆ 2ನೇ ಸ್ಥಾನ ಪಡೆದಿದ್ದಾರೆ. ಪ್ರತೀ ವಿಭಾಗದಲ್ಲೂ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗಿತ್ತು.

ರ್ಯಾಲಿ ಸ್ಫರ್ಧೆಯನ್ನು ಅತ್ಯುತ್ತಮ ರೀತಿಯಲ್ಲಿ ಆಯೋಜಿಸಲಾಗಿದ್ದು ಎರಡು ಕಾರುಗಳು ಒಂದೇ ಸಮಯದಲ್ಲಿ ಪ್ರಾರಂಭ ಸ್ಥಳದಿಂದ ಒಟ್ಟೊಟ್ಟಿಗಿನ ಟ್ರಾಕ್ ಗಳಲ್ಲಿ ತೆರಳುವಂತೆ ಮಾಡಲಾಗಿತ್ತು. ಜೊತೆಗೆ ಒಂದು ಕಾರು ರ್ಯಾಂಪ್ ಮೇಲೆ ತೆರಳಿದರೆ ಮತ್ತೊಂದು ಕಾರು ರ್ಯಾಂಪ್ನ ಕೆಳಗೆ ಚಲಿಸುವಂತೆ ಆಯೋಜಿಸಲಾಗಿದ್ದು ರ್ಯಾಲಿಯಲ್ಲಿ ಉತ್ತಮ ಅನುಭವವಾಗಿದೆಂದು ಬೋಪಯ್ಯ ಹೇಳಿದ್ದಾರೆ.

 

Desk

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

8 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

8 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

8 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

9 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

9 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

9 hours ago