News Karnataka Kannada
Monday, April 29 2024
ಕ್ರೀಡೆ

ಮೂರನೇ ಪಂದ್ಯ, ಸರಣಿ ಗೆದ್ದ ಟೀಂ ಇಂಡಿಯಾ

Photo Credit :

ಮೂರನೇ ಪಂದ್ಯ, ಸರಣಿ ಗೆದ್ದ ಟೀಂ ಇಂಡಿಯಾ

ಬೇ ಓವಲ್: ತೃತೀಯ ಹಾಗೂ ಮಹತ್ವದ ಮೂರನೇ ಏಕದಿನ ಪಂದ್ಯದಲ್ಲಿ ಏಳು ವಿಕೆಟ್ ಗೆಲುವು ದಾಖಲಿಸಿಕೊಂಡ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ವಶಪಡಿಸಿಕೊಂಡಿದೆ.

ಕಿವೀಸ್ ನ್ನು ಕೇವಲ 243 ರನ್ ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ಇನ್ನು ಎಂಟು ಓವರ್ ಬಾಕಿ ಇರುವಂತಹ ಮೂರು ವಿಕೆಟ್ ನಷ್ಟಕ್ಕೆ ಗೆಲುವು ತನ್ನದಾಗಿಸಿಕೊಂಡಿತು. ಐದು ಪಂದ್ಯಗಳ ಸರಣಿಯಲ್ಲಿ ವೈಟ್ ವಾಶ್ ಮಾಡುವ ಅವಕಾಶವು ಭಾರತಕ್ಕಿದೆ.

ಗೆಲುವಿಗೆ ಸುಲಭ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಅಗ್ರ ಸರದಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅರ್ಧ ಶತಕದಿಂದ ಭದ್ರ ಬುನಾದಿ ಹಾಕಿತು. ರೋಹಿತ್ 62 ಮತ್ತು ಕೊಹ್ಲಿ 60 ರನ್ ಬಾರಿಸಿದರು.

ಅಂತ್ಯದಲ್ಲಿ ಅಂಬಾಟಿ ರಾಯುಡು 40 ಮತ್ತು ದಿನೇಶ್ ಕಾರ್ತಿಕ್ 38 ರನ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಯುಡು ಕೇವಲ 42 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 40 ರನ್ ಮತ್ತು ಕಾರ್ತಿಕ್ 38 ಎಸೆತಗಳಲ್ಲಿ 38 ರನ್ ಬಾರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು