Categories: ಕ್ರೀಡೆ

ಭಾರತೀಯ ಕ್ರಿಕೆಟ್‌ ಆಟಗಾರರ ಕೋವಿಡ್ ವರದಿ ನೆಗೆಟಿವ್

ಇಂಗ್ಲೆಂಡ್‌: ಕೊರೊನಾ ಆತಂಕದಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯಕ್ಕೆ ಕವಿದಿದ್ದ ಆತಂಕದ ಕಾರ್ಮೋಡ ಸರಿದಿದೆ.

ಭಾರತ ತಂಡದ ಎಲ್ಲಾ ಸದಸ್ಯರ ಕೊರೊನಾ ಟೆಸ್ಟ್​ನ ವರದಿ ನೆಗೆಟಿವ್ ಬಂದಿದ್ದು, ಪಂದ್ಯ ನಿಗದಿಯಂತೆ ನಡೆಯಲಿದೆ ಎನ್ನಲಾಗಿದೆ.

ಭಾರತ ತಂಡದ ಫಿಸಿಯೊ ಕೊರೊನಾ ಪಾಸಿಟಿವ್ ಆಗಿದ್ದ ಕಾರಣ, ಗುರುವಾರ ಭಾರತ ತಂಡ ಅಭ್ಯಾಸದಿಂದ ಮರಳಿತ್ತು ಹಾಗೂ ತಂಡದ ಎಲ್ಲಾ ಸದಸ್ಯರನ್ನು ಆರ್​ಟಿ- ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಫಲಿತಾಂಶ ಬಂದಿದ್ದು, ಎಲ್ಲರ ಸಮಾಧಾನಕ್ಕೆ ಕಾರಣವಾಗಿದೆ.

ಯೋಗೇಶ್ ಪಾರ್ಮಾರ್ ಅವರಿಗೆ ಪಾಸಿಟಿವ್ ಬಂದಾಗ, ಭಾರತ ತಂಡದ ಸದಸ್ಯರು ಅಭ್ಯಾಸವನ್ನು ಕೊನೆಗೊಳಿಸಿ, ರೂಮ್​ಗಳಲ್ಲಿ ಕ್ವಾರಂಟೈನ್ ಆಗಿದ್ದರು. ಇದೀಗ ವರದಿ ನೆಗೆಟಿವ್ ಬಂದಿರುವುದರಿಂದ ಇಂದಿನ ಟೆಸ್ಟ್ ನಿಗದಿಯಂತೆಯೇ ನಡೆಯಲಿದೆ. ಪಂದ್ಯ ಮುಗಿಯುವವರೆಗೆ ಭಾರತ ತಂಡವು ಮ್ಯಾಮಚೆಸ್ಟರ್​ನ ಹೊಟೆಲ್​ನಲ್ಲಿ ಬಯೋ ಬಬಲ್​ನಲ್ಲಿ ಇರಲಿದೆ ಎಂದು ಇಸಿಬಿಯ ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳ ಹಿಂದೆ ಭಾರತ ತಂಡದ ಪ್ರಧಾನ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆದ್ದರಿಂದ ಅವರನ್ನು ತಂಡದಿಂದ ಪ್ರತ್ಯೇಕಿಸಲಾಗಿತ್ತು. ಭಾರತ ತಂಡದ ಕೋಚಿಂಗ್ ಸ್ಟಾಫ್​ನಲ್ಲಿ ಹಲವರು ಸೋಂಕಿಗೆ ತುತ್ತಾಗಿರುವುದರಿಂದ ಸೀಮಿತ ತರಬೇತುದಾರರೊಂದಿಗೆ ಭಾರತ ತಂಡ ಮ್ಯಾಂಚೆಸ್ಟರ್​ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಬೇಕಿದೆ.

 

Sampriya YK

Recent Posts

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

2 mins ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

13 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

44 mins ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

52 mins ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

54 mins ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

1 hour ago