News Karnataka Kannada
Monday, April 29 2024
ಕ್ರೀಡೆ

ಭಾರತದ ಪರ ಗರಿಷ್ಟ ವಿಕೆಟ್ ಪಡೆಯಬೇಕು: ಮೊಹಮ್ಮದ್ ಸಿರಾಜ್

Photo Credit :

ಭಾರತದ ಪರ ಗರಿಷ್ಟ ವಿಕೆಟ್ ಪಡೆಯಬೇಕು: ಮೊಹಮ್ಮದ್ ಸಿರಾಜ್

ಚೆನ್ನೈ : ಕ್ರಿಕೆಟ್​ನಲ್ಲಿ ವೇಗವಾಗಿ ಬೆಳೆಯುತ್ತಿರುವ ವೇಗಿ ಮೊಹಮ್ಮದ್ ಸಿರಾಜ್, ಮೈದಾನದಲ್ಲಿ ಕಠಿಣ ಹೆಜ್ಜೆಯನ್ನಿಡಲು ಮತ್ತು ಸಿಕ್ಕ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಿದ್ಧರಾಗಿದ್ದಾರೆ. ಉದಯೋನ್ಮುಖ ಕ್ರಿಕೆಟರ್ ಆಗಿರುವ ಸಿರಾಜ್​, ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್​ ಎನಿಸಕೊಳ್ಳುವುದು, ತಮ್ಮ ಕನಸು ಎಂದಿದ್ದಾರೆ.

27 ವರ್ಷದ ವೇಗಿ ಭಾರತದ ಪರ 5 ಟೆಸ್ಟ್, ಒಂದು ಏಕದಿನ ಪಂದ್ಯ ಮತ್ತು 3 ಟಿ-20 ಪಂದ್ಯಗಳನ್ನಾಡಿದ್ದಾರೆ. ತಂಡದಲ್ಲಿ ಕಠಿಣ ಪೈಪೋಟಿಯಿದ್ದರೂ ಸಿಕ್ಕ ಕೆಲವೇ ಅವಕಾಶಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಮೂರು ಮಾದರಿಯ ಕ್ರಿಕೆಟ್​ನಲ್ಲಿ ತಮ್ಮ ಸಾಧನೆಯ ಶ್ರೇಯವನ್ನು ತಂಡದ ಸಹ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾಗೆ ನೀಡಿದ್ದಾರೆ.

ಜಸ್ಪ್ರೀತ್ ಬುಮ್ರಾ, ‘ನಾನು ಬೌಲಿಂಗ್ ಮಾಡುವಾಗಲೆಲ್ಲಾ ನನ್ನ ಪಕ್ಕದಲ್ಲೆ ಇದ್ದು ಮಾರ್ಗದರ್ಶನ ನೀಡುತ್ತಾರೆ. ಅಂತಹ ಅನುಭವಿ ಆಟಗಾರನಿಂದ ಕಲಿಯುವುದಕ್ಕೆ ನನಗೆ ಬಹಳ ಖುಷಿಯಿದೆ’ ಎಂದು ಸಿರಾಜ್ ಆರ್​ಸಿಬಿ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

‘ನಾನು ಇಶಾಂತ್​ ಶರ್ಮಾ ಅವರೊಂದಿಗೂ ಆಡಿದ್ದೇನೆ. ಅವರು 100 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವುದಕ್ಕೆ ತುಂಬಾ ಉತ್ತಮ ಭಾವನೆಯಿದೆ. ನನಗೆ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಕನಸಿದೆ. ಅದಕ್ಕಾಗಿ ನನಗೆ ಯಾವಾಗ ಅವಕಾಶ ಸಿಕ್ಕರೂ ಕಠಿಣ ಪರಿಶ್ರಮ ವಹಿಸುತ್ತೇನೆ ಎಂದಿದ್ದಾರೆ.

ಆರ್​ಸಿಬಿ ಪರ ಸಿರಾಜ್ 35 ಪಂದ್ಯಗಳನ್ನಾಡಿದ್ದು, 39 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಕೆಲವು ಅದ್ಭುತ ಪ್ರದರ್ಶನ ತೋರಿದ್ದರು. ಈ ವರ್ಷವೂ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು