ನವದೆಹಲಿ : ಮುಂಬರುವ ಋತುವಿನಲ್ಲಿ ಎರಡು ಹೊಸ ತಂಡಗಳ ಹಕ್ಕನ್ನು ಪಡೆಯಲು ಐಪಿಎಲ್ ಆಡಳಿತ ಮಂಡಳಿ ಬಿಡ್ಗಳನ್ನು ಆಹ್ವಾನಿಸಿದೆ. ಈ ನಡುವೆ ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಲೀಗ್ನಲ್ಲಿ ಹೊಸ ಫ್ರಾಂಚೈಸಿಗಾಗಿ ಬಿಡ್ ಮಾಡಬಹುದು ಅಂತ ಖಾಸಗಿ ಮಾಧ್ಯಮಗಳು ವರದಿಮಾಡಿದೆ.
ಇದಕ್ಕೂ ಮುನ್ನ, ಅದಾನಿ ಗ್ರೂಪ್ ಮತ್ತು ಆರ್ಪಿ-ಸಂಜೀವ್ ಗೋಯೆಂಕಾ ಗುಂಪುಗಳು ಮುಂಬರುವ ಟಿ 20 ಟೂರ್ನಮೆಂಟ್ಗಾಗಿ ಹೊಸ ಐಪಿಎಲ್ 2022 ತಂಡಗಳನ್ನು ಹೊಂದಲು ಆಸಕ್ತಿ ಹೊಂದಿದ್ದವು, ಈಗ ಆ ಸಾಲಿಗೆ ಈ ಬಾಲಿವುಡ್ನ ತಾರದಂಪತಿಗಳು ಕೂಡ ಸೇರಿಕೊಳ್ಳುತ್ತಿರುವುದು ಎಲ್ಲರಲ್ಲೂ ಕೂತುಹಲವನ್ನು ಹೆಚ್ಚಳ ಮಾಡಿದೆ. ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಸಹ ಮಾಲೀಕತ್ವ ಹೊಂದಿದ್ದು, ಪ್ರೀತಿ ಜಿಂಟಾ ಪಂಜಾಬ್ ಕಿಂಗ್ಸ್ ನಲ್ಲಿ ಪಾಲು ಹೊಂದಿದ್ದಾರೆ. ಮೇಲಾಗಿ, ಕ್ರೀಡಾ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿರುವ ದೀಪಿಕಾ ಐಪಿಎಲ್ ತಂಡವನ್ನು ಹೊಂದಿದ್ದರಲ್ಲಿ ಆಶ್ಚರ್ಯವೇನಿಲ್ಲ.