News Karnataka Kannada
Thursday, May 02 2024
ಕ್ರೀಡೆ

ಬರೋಬ್ಬರಿ 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡ ಪಾಕ್​ ಪ್ರವಾಸ!

Australia
Photo Credit :

ಬರೋಬ್ಬರಿ 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡ ಪಾಕ್​ ಪ್ರವಾಸ ಕೈಗೊಳ್ಳುತ್ತಿದ್ದು,ಇಲ್ಲಿ ಮೂರು ಟೆಸ್ಟ್​ ಪಂದ್ಯ ಹಾಗೂ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿವೆ .

ಈ ಕುರಿತು ಮಾಹಿತಿ ನೀಡಿದ ಕ್ರಿಕೆಟ್​ ಆಸ್ಟ್ರೇಲಿಯಾ, ಮಾರ್ಚ್ 4ರಿಂದ ಉಭಯ ತಂಡಗಳ ನಡುವಿನ ಕ್ರಿಕೆಟ್​ ಟೂರ್ನಿ ಆರಂಭಗೊಳ್ಳಲಿದೆ ಎಂದು ತಿಳಿಸಿದೆ.

ಆಸ್ಟ್ರೇಲಿಯಾ 1998ರಲ್ಲಿ ಕೊನೆಯದಾಗಿ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಇಬಳಿಕ 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ ಅನೇಕ ವರ್ಷಗಳ ಕಾಲ ಯಾವುದೇ ತಂಡಗಳು ಇಲ್ಲಿಗೆ ಪ್ರವಾಸ ಕೈಗೊಂಡಿರಲಿಲ್ಲ.

ಕಳೆದ ಕೆಲ ವರ್ಷಗಳಿಂದ ವೆಸ್ಟ್ ಇಂಡೀಸ್​, ಬಾಂಗ್ಲಾದೇಶ, ಜಿಂಬಾಬ್ವೆ ಸೇರಿದಂತೆ ಕೆಲವು ದೇಶಗಳು ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗಿಯಾಗಿತ್ತು.

ಇದೀಗ 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ತೆರಳುತ್ತಿದ್ದು,ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್​​​ನಲ್ಲಿ ಟೆಸ್ಟ್​ ಪಂದ್ಯಗಳು ನಡೆಯಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು