Categories: ಕ್ರೀಡೆ

ಪ್ರೊ ಕಬಡ್ಡಿ ಟೂರ್ನಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು : ಮಾಷಾಲ್ ಸ್ಪೋರ್ಟ್ಸ್ ಆಯೋಜಿಸುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಎಂಟನೇ ಆವೃತ್ತಿಯ ಪಂದ್ಯಗಳು ಹೋಟೆಲ್‌ನಲ್ಲಿ ನಡೆಯಲಿವೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರೆಟಾನ್ ಗ್ರ್ಯಾಂಡ್ ಹೋಟೆಲ್‌ನ ಸಭಾಂಗಣವನ್ನೇ ಕ್ರೀಡಾಂಗಣದ ಮಾದರಿಯಲ್ಲಿ ಸಿದ್ಧಗೊಳಿಸಿ ಟೂರ್ನಿ ಆಯೋಜಿಸಲು ಸಿದ್ಧತೆ ನಡೆದಿದೆ. ಕೋವಿಡ್‌-19ರ ಆತಂಕದಿಂದಾಗಿ ಈ ಕ್ರಮಕ್ಕೆ ಆಯೋಜಕರು ಮುಂದಾಗಿದ್ದಾರೆ. ಪ್ರೇಕ್ಷಕರಿಗೆ ಪ್ರವೇಶ ನೀಡದೇ ಇರಲು ನಿರ್ಧರಿಸಲಾಗಿದೆ.

ಇದೇ ತಿಂಗಳ 22ರಂದು ಟೂರ್ನಿ ಆರಂಭವಾಗಲಿದ್ದು ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಮೊದಲ ನಾಲ್ಕು ದಿನ ಟ್ರಿಪಲ್ ಹೆಡರ್ಸ್‌ (ಪ್ರತಿ ದಿನ ಮೂರು ಪಂದ್ಯ) ಮತ್ತು ಶನಿವಾರಗಳಲ್ಲಿ ಟ್ರಿಪಲ್ ಪಂಗಾ (ಮೂರು ಪಂದ್ಯ) ಈ ಬಾರಿಯ ವೈಶಿಷ್ಟ್ಯ.

ಮೂರು ಪಂದ್ಯಗಳು ಇರುವ ದಿನಗಳಲ್ಲಿ ಮೊದಲ ಹಣಾಹಣಿ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ 8.30ಕ್ಕೆ ಮತ್ತು ಕೊನೆಯ ಪಂದ್ಯ 9.30ಕ್ಕೆ ಆರಂಭವಾಗಲಿದೆ. ಎಂಟನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಲಿದೆ.

‘ದಕ್ಷಿಣ ಡರ್ಬಿ’ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ಹಣಾಹಣಿ ನಡೆಯಲಿದೆ. ಯುಪಿ ಯೋಧಾ ಮತ್ತು ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಕೊನೆಯ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಎರಡನೇ ಹಂತದ ವೇಳಾಪಟ್ಟಿ ಜನವರಿ ಎರಡನೇ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

‘ದೇಶಿ ಸೊಬಗಿನ ಕಬಡ್ಡಿಯನ್ನು ಹೆಚ್ಚು ರೋಮಾಂಚಕವಾಗಿಸುವುದಕ್ಕಾಗಿ ಹೊಸ ಮಾದರಿಯನ್ನು ಜಾರಿಗೆ ತರಲಾಗಿದೆ. ‘ಟ್ರಿಪಲ್‌’ ಪಂದ್ಯಗಳು ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಲು ನೆರವಾಗಲಿದೆ. ಎರಡು ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡುವುದರಿಂದ ತಂಡಗಳಿಗೆ ರಣತಂತ್ರಗಳನ್ನು ಹೆಣೆಯುವುದು ಸುಲಭವಾಗಲಿದೆ’ ಎಂದು ಲೀಗ್ ಕಮಿಷನರ್‌ ಅನುಪಮ್ ಗೋಸ್ವಾಮಿ ಅಭಿಪ್ರಾಯಪಟ್ಟರು.

ಮೊದಲ ಹಂತದಲ್ಲಿ ಬೆಂಗಳೂರು ಬುಲ್ಸ್ ಪಂದ್ಯಗಳು

ದಿನಾಂಕ;ಎದುರಾಳಿ;ಸಮಯ

ಡಿ.22;ಯು ಮುಂಬಾ;7.30

ಡಿ.24;ತಮಿಳ್‌ ತಲೈವಾಸ್;8.30

ಡಿ.26;ಬೆಂಗಾಲ್ ವಾರಿಯರ್ಸ್‌;8.30

ಡಿ.30;ಹರಿಯಾಣ ಸ್ಟೀಲರ್ಸ್‌;8.30

ಜ.1;ತೆಲುಗು ಟೈಟಾನ್ಸ್;8.30

ಜ.2;ಪುಣೇರಿ ಪಲ್ಟನ್‌;8.30

ಜ.6;ಜೈಪುರ್ ಪಿಂಕ್ ‍ಪ್ಯಾಂಥರ್ಸ್‌;8.30

ಜ.9;ಯು.ಪಿ.ಯೋಧಾ;8.30

ಜ.12;ದಬಾಂಗ್ ಡೆಲ್ಲಿ;8.30

ಜ.14;ಗುಜರಾತ್ ಜೈಂಟ್ಸ್‌;8.30

ಜ.16;ಪಟ್ನಾ ಪೈರೇಟ್ಸ್‌;8.30

Gayathri SG

Recent Posts

ನಗರ ಸಾರಿಗೆ ಬಸ್‌ ಮಾರ್ಗ ಬದಲಾಯಿಸಲು ಆಗ್ರಹ

ನಗರದಲ್ಲಿ ಸಂಚರಿಸುವ ನಗರ ಸಾರಿಗೆಯ ಎಲ್ಲ ಬಸ್‌ಗಳು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ವೃತ್ತದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು…

3 mins ago

ನಟಿ ಮಾಳವಿಕಾ ಅವಿನಾಶ್ ತಂದೆ ನಟೇಶನ್ ಗಣೇಶನ್ ನಿಧನ

ರಾಜ್ಯ ಬಿಜೆಪಿ ಉಪಾಧ್ಯಕ್ಷ, ನಟಿ, ಮಾಳವಿಕಾ ಅವಿನಾಶ್ ಅವರ ತಂದೆ ನಟೇಶನ್ ಗಣೇಶನ್ ಅವರು ನಿಧನರಾಗಿದ್ದಾರೆ.

11 mins ago

ಪತ್ನಿಯ ಗುಪ್ತಾಂಗವನ್ನು ಮೊಳೆಗಳಿಂದ ವಿರೂಪಗೊಳಿಸಿ,ಬೀಗ ಹಾಕಿದ ಕ್ರೂರ ಪತಿ

ಪುಣೆಯಲ್ಲಿ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನನಾಂಗವನ್ನು ಕಬ್ಬಿಣದ ಮೊಳೆಗಳಿಂದ ವಿರೂಪಗೊಳಿಸಿದ್ದಾನೆ ಮತ್ತು ಆಕೆಯ ಮೇಲೆ ಸಂದೇಹ ವ್ಯಕ್ತಪಡಿಸಿದ…

28 mins ago

ಬೀದರ್: ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ಆಸರೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ.

34 mins ago

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

53 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

57 mins ago