Categories: ಕ್ರೀಡೆ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಗೆ ಐದು ದಿನಗಳ ಕ್ವಾರಂಟೈನ್‌!

ಐಪಿಎಲ್ ಅಂಗಳಕ್ಕೆ ಈಗಾಗಲೇ ಕೊರೋನಾ ಲಗ್ಗೆ ಇಟ್ಟಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಈ ಹಿನ್ನೆಲೆ ಐದು ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ಐಪಿಎಲ್ 2022ನೇ ಟೂರ್ನಿಯಲ್ಲಿ ಇಂದು (ಶುಕ್ರವಾರ) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಹಣಾಹಣಿಗೂ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ. ಆದರೆ ಪಾಂಟಿಂಗ್ ಅವರಿಗೆ ಎರಡು ಬಾರಿ ನಡೆಸಲಾದ ಕೋವಿಡ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ.
ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪಾಂಟಿಂಗ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಇದುವರೆಗೆ ಆರು ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆ. ಡೆಲ್ಲಿ ತಂಡದ ಆಟಗಾರ ಮಿಚೆಲ್ ಮಾರ್ಷ್, ಫಿಸಿಯೊ ಪ್ಯಾಟ್ರಿಕ್ ಫರ್ಹಾಟ್, ಮಸಾಜ್ ತಜ್ಞ ಚೇತನ್ ಕುಮಾರ್, ವೈದ್ಯ ಅಭಿಜಿತ್ ಸಾಳ್ವಿ ಮತ್ತು ಸಾಮಾಜಿಕ ಜಾಲತಾಣ ನಿರ್ವಾಹಕ ತಂಡದ ಸದಸ್ಯ ಆಕಾಶ್ ಮಾನೆ ಅವರು ಸೋಂಕಿತರಾಗಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ

Sneha Gowda

Recent Posts

ಚಾಮರಾಜನಗರ: ಸಿಡಿಲು ಬಡಿದು ಮೂರು ಜಾನುವಾರುಗಳು ಸಾವು

ಸಿಡಿಲು ಬಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಚೆನ್ನೂರು ಗ್ರಾಮದಲ್ಲಿ ನಡೆದಿದೆ.

16 mins ago

ರಾಯ್‌ಬರೇರಿಯಲ್ಲಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ; ಕಿಶೋರಿ ಶರ್ಮಾ ಪಾಲಾದ ಅಮೇಥಿ

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರು ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಕಡೆಗೂ ತೆರೆ ಬಿದ್ದಿದ್ದು, ರಾಹುಲ್‌ ಗಾಂಧಿ ತಮ್ಮ…

22 mins ago

ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ

ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ. ನಿನ್ನೆಯಿಂದ ಮೂರ್ತಿಯ ಉಳಿದ…

46 mins ago

ಅನ್ನದಾತರ ಕನಸಿಗೆ ಬರೆ ಎಳೆದ ಗಾಳಿ ಮಳೆ: ಎಕರೆಗಟ್ಟಲೇ ಬಾಳೆ ಫಸಲು ನಾಶ

ಬಿಸಿಲಿನ ತಾಪಮಾನದಿಂದ ಬಸವಳಿದ್ದ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ವರುಣಾಗಮನದಿಂದಾಗಿ ತಂಪಿನ…

46 mins ago

ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿದ್ದೆ ಸಿಎಂ: ಆರ್ ಅಶೋಕ್ ಆಕ್ರೋಶ

ಎಲ್ಲಾ ಎಪಿಸೋಡ್‌ಗಳನ್ನ ನೋಡಿದಾಗ ಸಿದ್ದರಾಮಯ್ಯನವರೇ ಪ್ರಜ್ವಲ್ ರೇವಣ್ಣ ನನ್ನು ವಿದೇಶಕ್ಕೆ ಕಳಿಸಿದಾರೆ ಅನಿಸುತ್ತೆ ಎಂದು ಬೀದರ್‌ನಲ್ಲಿ ವಿಪಕ್ಷ ನಾಯಕ ಆರ್…

1 hour ago

ಇಂದು ಮಧ್ಯಾಹ್ನದಿಂದಲೇ ಸಿಲಿಕಾನ್​ ಸಿಟಿಯಲ್ಲಿ ಭರ್ಜರಿ ಮಳೆ

ಬರೋಬ್ಬರಿ 6 ತಿಂಗಳ ಬಳಿಕ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ನಗರದ…

1 hour ago