ಕ್ರೀಡೆ

ಟಿ20 ವಿಶ್ವಕಪ್ : ಇಂಗ್ಲೆಂಡ್ ತಂಡಕ್ಕೆ ಬಾಂಗ್ಲಾದೇಶ ಎದುರು 8 ವಿಕೆಟ್ ಜಯ

ಅಬುಧಾಬಿ : ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ನಿರ್ವಹಣೆ ತೋರಿದ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ರಲ್ಲಿ ಸತತ 2ನೇ ಜಯ ದಾಖಲಿಸಿತು. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಮತ್ತೊಂದೆಡೆ, ಸತತ 2ನೇ ಸೋಲು ಕಂಡ ಬಾಂಗ್ಲಾ ತಂಡದ ಮುಂದಿನ ಹಾದಿ ಕಠಿಣಗೊಂಡಿತು.

ಟಾಸ್ ಜಯಿಸಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊಯಿನ್ ಅಲಿ (18ಕ್ಕೆ 2) ಆರಂಭಿಕ ಹಂತದಲ್ಲಿ ಹಾಗೂ ತೈಮಲ್ ಮಿಲ್ಸ್ (27ಕ್ಕೆ 3) ಮಧ್ಯಮ ಕ್ರಮಾಂಕದಲ್ಲಿ ಆಘಾತ ನೀಡಿದರು. ಮುಶ್ಫಿಕರ್ ರಹೀಂ (29ರನ್, 30 ಎಸೆತ, 3 ಬೌಂಡರಿ) ಕೆಲಕಾಲ ಹೋರಾಡಿದ ಪರಿಣಾಮ ಬಾಂಗ್ಲಾ ತಂಡ 9 ವಿಕೆಟ್‌ಗೆ 124 ರನ್ ಪೇರಿಸಲಷ್ಟೇ ಶಕ್ತವಾಯಿತು. ಬಳಿಕ ಈ ಅಲ್ಪಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಜೇಸನ್ ರಾಯ್ (61ರನ್, 38 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಡೇವಿಡ್ ಮಲನ್ (28*ರನ್, 25 ಎಸೆತ, 3 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 14.1 ಓವರ್‌ಗಳಲ್ಲಿ 2 ವಿಕೆಟ್‌ಗೆ 126 ರನ್‌ಗಳಿಸಿ ಜಯದ ನಗೆ ಬೀರಿತು. ಜೇಸನ್ ರಾಯ್ ಹಾಗೂ ಡೇವಿಡ್ ಮಲನ್ ಜೋಡಿ 2ನೇ ವಿಕೆಟ್‌ಗೆ 73 ರನ್ ಜತೆಯಾಟವಾಡಿದ ಫಲವಾಗಿ ಇಂಗ್ಲೆಂಡ್ ತಂಡದ ಗೆಲುವು ಸುಲಭವಾಗಿಸಿತು.

ಬಾಂಗ್ಲಾದೇಶ: 9 ವಿಕೆಟ್‌ಗೆ 124 (ಮುಸ್ತಾಫಿಜರ್ ರಹೀಮ್ 29, ಮೊಹಮದುಲ್ಲ 19, ನಸುಮ್ ಅಹಮದ್ 19*, ಮೊಯಿನ್ ಅಲಿ 18ಕ್ಕೆ 2, ತೈಮಲ್ ಮಿಲ್ಸ್ 27ಕ್ಕೆ 3, ಲಿಯಾಮ್ ಲಿವಿಂಗ್‌ಸ್ಟೋನ್ 15ಕ್ಕೆ 2), ಇಂಗ್ಲೆಂಡ್: 14.1 ಓವರ್‌ಗಳಲ್ಲಿ 2 ವಿಕೆಟ್‌ಗೆ 126 (ಜೇಸನ್ ರಾಯ್ 61, ಡೇವಿಡ್ ಮಲನ್ 28*, ಜಾನಿ ಬೇರ್‌ಸ್ಟೋ 8*, ಶೋರಿುಲ್ ಇಸ್ಲಾಂ 26ಕ್ಕೆ 1, ನಸುಮ್ ಅಹಮದ್ 26ಕ್ಕೆ 1).

Gayathri SG

Recent Posts

ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನಗಳು ಬಂದರೆ ಮಥುರಾ, ಕಾಶಿಯಲ್ಲಿ ಭವ್ಯ ಮಂದಿರ: ಅಸ್ಸಾಂ ಸಿಎಂ

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಚುನಾವಣಾ ಭಾಷಣವೊಂದರಲ್ಲಿ ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿದೆ.

11 mins ago

ಬಿಜೆಪಿ ಈಗಾಗಲೇ ಸರಳ ಬಹುಮತದ ನಂಬರ್ ದಾಟಿದೆ: ಅಣ್ಣಾಮಲೈ

ಲೋಕಸಭಾ ಚುನಾವಣೆಗೆ ದೇಶಾದ್ಯಂತ 4 ಹಂತದ ಮತದಾನ ಮುಕ್ತಾಯವಾಗಿದೆ. ಕರ್ನಾಟಕ ಸೇರಿದಂತೆ 380 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ…

17 mins ago

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ವಿಶ್ವ ದಾದಿಯರ ದಿನ ಆಚರಣೆ

ಮಂಗಳೂರಿನ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು  ಮೇ 14ರಂದು ಆಸ್ಪತ್ರೆಯ ಎಮ್‍ಕಾಡ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು.

18 mins ago

ಎಸ್.ಎಸ್.ಎಲ್.ಸಿ ಪರೀಕ್ಷೆ: ಕೊಂಕಣಿಯಲ್ಲಿ ಆರು ವಿದ್ಯಾರ್ಥಿಗಳಿಗೆ 100% ಅಂಕ

ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕೊಂಕಣಿ ಶಿಕ್ಷಕರ ನೇಮಕಾತಿಯಾದ ಹತ್ತು ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿನ ಒಟ್ಟು ಆರು ವಿದ್ಯಾರ್ಥಿಗಳು…

40 mins ago

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ನಾಪತ್ತೆ

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮೇ 14ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ…

41 mins ago

ಬಂಟ್ವಾಳ ಜಮೀಯ್ಯತುಲ್ ಫಲಾಹ್, ರೋಟರಿ ಕ್ಲಬ್ ನಿಂದ “ಮೆಹ್’ಫಿಲೇ ಈದ್”

 ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್'ಫಿಲೇ…

51 mins ago