Categories: ಕ್ರೀಡೆ

ಟಿ-20 ಲಿವಿಸ್ ಅಬ್ಬರಕ್ಕೆ ತತ್ತರಿಸಿದ ಟೀಂ ಇಂಡಿಯಾ

ಜಮೈಕಾ: ಭಾರತ ವಿರುದ್ಧದ ಏಕೈಕ ಟಿ-20 ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ವಿಂಡೀಸ್‌‌ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರ ಎವಿನ್ ಲಿವಿಸ್‌ ಅಬ್ಬರದ ಶತಕದಿಂದ ವಿಂಡೀಸ್‌ ತಂಡ 9 ವಿಕೆಟ್‌‌ಗಳ ಗೆಲುವು ದಾಖಲಿಸಿದೆ.

ಕಿಂಗ್ಸ್ ನ ಸಬಿನಾ ಪಾರ್ಕ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತು. 191 ರನ್ ಗಳ ಗುರಿ ಬೆನ್ನತ್ತಿದ ಆತಿಥೇಯ ತಂಡ ಎವಿನ್ ಲಿವಿಸ್ (125) ಅಬ್ಬರದ ಶತಕದ ನೆರವಿನೊಂದಿಗೆ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಕೇವಲ 62 ಎಸೆತಗಳಲ್ಲಿ 125 ರನ್ ಸಿಡಿಸಿದ ಎವಿನ್ ಲಿವಿಸ್ ಭಾರತದ ಬೌಲರ್ ಗಳನ್ನು ಬೆಂಡೆತ್ತಿದ್ದರು. ಲಿವಿಸ್ ಇನ್ನಿಂಗ್ಸ್ ನಲ್ಲಿ 12 ಸಿಕ್ಸ್ ಗಳು ಹಾಗೂ 6 ಫೋರ್ ಗಳನ್ನು ಒಳಗೊಂಡಿದ್ದವು.

ಕ್ರಿಸ್ ಗೇಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಲಿವಿಸ್ ಆರಂಭದಿಂದಲ್ಲೇ ಸ್ಫೋಟಕ ಆಟಕ್ಕೆ ಮೊರೆ ಹೋದರು. 24 ಎಸೆತಗಳಲ್ಲೇ ಲಿವಿಸ್ ಅರ್ಧಶತಕ ಬಾರಿಸಿದರು. ತಂಡದ ಮೊತ್ತ 82 ರನ್ ಆಗಿದ್ದಾಗ 19 ಎಸೆತಗಳನ್ನು ಎದುರಿಸಿದ ಗೇಲ್ 18 ರನ್ ಗಳಿಸಿ ಕುಲ್ ದೀಪ್ ಯಾದವ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಲಿವಿಸ್ ಮಾತ್ರ ಟೀಂ ಇಂಡಿಯಾ ಬೌಲರ್ ಗಳನ್ನು ದಂಡಿಸುತ್ತಲೇ ಸಾಗಿದರು. ಪರಿಣಾಮ ಕೇವಲ 53 ಎಸೆತಗಳಲ್ಲಿ 100 ರನ್ ಸಿಡಿಸಿದರು. ಶತಕದ ನಂತರವೂ ಅಬ್ಬರದ ಆಟ ಪ್ರದರ್ಶಿಸಿದ ಲಿವಿಸ್ 62 ಎಸೆತಗಳಲ್ಲಿ 125 ರನ್ ಬಾರಿಸುವ ಮೂಲಕ ತಂಡಕ್ಕೆ ಭರ್ಜರಿ ತಂದುಕೊಟ್ಟರು. 18.3 ಓವರ್ ಗಳಲ್ಲಿ ವಿಂಡೀಸ್ ತಂಡ ಕೇವಲ 1 ವಿಕೆಟ್ ನಷ್ಟಕ್ಕೆ ಗೆಲುವಿನ ಕೇಕೆ ಹಾಕಿತು. ಇನ್ನು, ಗೇಲ್ ನಂತರ ಮಾರ್ಲನ್ ಸ್ಯಾಮ್ಯುಯೆಲ್ಸ್ 29 ಎಸೆತಗಳಲ್ಲಿ 36 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಮೊದಲ ಬ್ಯಾಟ್ ಮಾಡಿದ ಟೀಂ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ತಂಡ ಕೇವಲ 4.4 ಓವರ್ ಗಳಲ್ಲಿ 50 ರ ಗಡಿ ದಾಟಿತು. ಈ ನಡುವೆ ತಂಡದ ಮೊತ್ತ 64ರನ್ ಆಗಿದ್ದಾಗ ನಾಯಕ ಕೊಹ್ಲಿ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಉತ್ತಮವಾಗಿ ಆಡುತ್ತಿದ್ದ ಶಿಖರ್ ಧವನ್ (23) ಸಹ ವಿಕೆಟ್ ಒಪ್ಪಿಸಿದರು. ಪರಿಣಾಮ ಟೀಂ ಇಂಡಿಯಾ ತಂಡ 10 ಓವರ್ನಲ್ಲಿ 2ವಿಕೆಟ್ ಕಳೆದುಕೊಂಡು 93ರನ್ ಗಳಿಸಿತು. ರಿಷಬ್ ಪಂತ್ ಜೊತೆಗೂಡಿ ಎಚ್ಚರಿಕೆ ಆಟವಾಡುತ್ತಿದ್ದ ದಿನೇಶ್ ಕಾರ್ತಿಕ್ 48ರನ್ ಗಳಿಸಿ ಔಟ್ ಆದರು. ಕಾರ್ತಿಕ್ ನಂತರ ಕಣಕ್ಕಿಳಿದ ಧೋನಿ ಸಹ ಕೇವಲ 2 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಮುಂದಿನ ಎಸೆತದಲ್ಲೇ ರಿಷಬ್ ಪಂತ್ (38) ಕೂಡ ಕ್ಯಾಚ್ ನೀಡಿದರು.

ನಂತರ ಕೇದಾರ್ ಜಾಧವ್ (4) ಸಹ ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. ರವೀಂದ್ರ ಜಡೇಜಾ (13 ಅಜೇಯ), ಆರ್.ಅಶ್ವಿನ್ (11 ಅಜೇಯ) ಸಹಾಯದಿಂದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು. ವೆಸ್ಟ್ ವಿಂಡೀಸ್ ಪರ ಜೆರೋಮ್ ಟೇಲರ್, ಕೆಸ್ರಿಕ್ ವಿಲಿಯಮ್ಸ್ ತಲಾ 2ವಿಕೆಟ್, ಮಾರ್ಲನ್ ಸ್ಯಾಮ್ಯುಯೆಲ್ಸ್ 1 ವಿಕೆಟ್ ಪಡೆದುಕೊಂಡಿದ್ದರು.

 

Desk

Recent Posts

ವಿವಾದಾತ್ಮಕ ಹೇಳಿಕೆ : ಶಾಸಕ ರಾಜು ಕಾಗೆಗೆ ಚುನಾವಣಾ ಇಲಾಖೆ ನೋಟಿಸ್‌

ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ(ಏ.30) ಪ್ರಿಯಾಂಕಾ ಜಾರಕಿಹೊಳಿ‌…

3 hours ago

ಕಾರ್ತಿಕ್​ ಜಯರಾಮ್​ ಹುಟ್ಟುಹಬ್ಬ ಪ್ರಯುಕ್ತ ‘ದಿ ವೀರ್​’​ ಪೋಸ್ಟರ್ ಔಟ್‌

ಸ್ಯಾಂಡಲ್​ವುಡ್​ನ ಖ್ಯಾತ ನಟ ಕಾರ್ತಿಕ್​ ಜಯರಾಮ್​ ಅಲಿಯಾಸ್​ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

3 hours ago

ಕೊಳೆತ ಸ್ಥತಿಯಲ್ಲಿ ಮಹಿಳೆ ಮೃತ ದೇಹ ಪತ್ತೆ

ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ…

3 hours ago

ವಿಜಯ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಅಮೀತ್ ಶಾಗೆ ಅದ್ದೂರಿ ಸ್ವಾಗತ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರಕ್ಕೆ ಬಂದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ವಿಜಯ…

4 hours ago

ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಶಸ್ತಿ ಪಡೆದ ‘ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ

ಕೆಂಡ’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದ್ದೆ. ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ಸಿನಿಮಾ…

4 hours ago

ಕಾಂಗ್ರೆಸ್ ಶಾಸಕನದ್ದು ಎನ್ನಲಾದ ಮತ್ತೊಂದು ಅಶ್ಲೀಲವಿಡಿಯೋ ವೈರಲ್‌

ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊರ್ವ ಶಾಸಕನ ವಿಡಿಯೋ ವೈರಲ್‌ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಶಾಸಕರದ್ದು ಎನ್ನಲಾದ…

5 hours ago