News Karnataka Kannada
Thursday, May 02 2024
ಕ್ರೀಡೆ

ಐಸಿಸಿ ತಂಡಕ್ಕೆ ಪಾಕಿಸ್ತಾನದ ಬಾಬರ್‌ ಅಜಂ ನಾಯಕ

Cricket Babar Azam
Photo Credit :

ದುಬೈ: ಭಾರತದ ಆತಿಥ್ಯದ ಟಿ20 ವಿಶ್ವಕಪ್‌ ಪಂದ್ಯಾವಳಿ ಯುಎಇಯಲ್ಲಿ ಯಶಸ್ವಿಯಾಗಿ ಮುಗಿದಿದೆ. ಆಸ್ಟ್ರೇಲಿಯ ಮೊದಲ ಸಲ ಕಪ್‌ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಈ ಬಾರಿಯ ಸಾಧಕ ಆಟಗಾರರನ್ನೊಳಗೊಂಡ 12 ಸದಸ್ಯರ ತಂಡವನ್ನು ಪ್ರಕಟಿಸಿದೆ (ಐಸಿಸಿ ಟೀಮ್‌ ಆಫ್ ಟೂರ್ನಮೆಂಟ್‌). ಇದರಲ್ಲಿ ಭಾರತದ ಯಾವುದೇ ಕ್ರಿಕೆಟಿಗರಿಲ್ಲ.

ಕೊಹ್ಲಿ ಪಡೆ ನಾಕೌಟ್‌ ಹಂತಕ್ಕೂ ಮೊದಲೇ ಕೂಟದಿಂದ ನಿರ್ಗಮಿಸಿದ್ದರಿಂದ ಹಾಗೂ ಸೂಪರ್‌-12 ಹಂತದಲ್ಲಿ ಭಾರತದ ಯಾರಿಂದಲೂ ಗಮನಾರ್ಹ ಸಾಧನೆ ಕಂಡುಬರದಿದ್ದುದೇ ಇದಕ್ಕೆ ಕಾರಣ ಎಂಬುದು ರಹಸ್ಯವಲ್ಲ.

ಬಾಬರ್‌ ಅಜಂ ನಾಯಕ: ಐಸಿಸಿ ತಂಡಕ್ಕೆ ಪಾಕಿಸ್ತಾನದ ಬಾಬರ್‌ ಅಜಂ ನಾಯಕರಾಗಿದ್ದಾರೆ. ಕೂಟದಲ್ಲೇ ಸರ್ವಾಧಿಕ 303 ರನ್‌ ಬಾರಿಸಿದ ಸಾಧನೆ ಇವರದ್ದಾಗಿದೆ. ಸರಣಿಶ್ರೇಷ್ಠ ಡೇವಿಡ್‌ ವಾರ್ನರ್‌ ಮತ್ತು ಇಂಗ್ಲೆಂಡಿನ ಜೋಸ್‌ ಬಟ್ಲರ್‌ ಆರಂಭಿಕರಾಗಿದ್ದಾರೆ. ಲಂಕೆಯ ಬಿಗ್‌ ಹಿಟ್ಟರ್‌ ಚರಿತ ಅಸಲಂಕ, ದಕ್ಷಿಣ ಆಫ್ರಿಕಾ ಐಡನ್‌ ಮಾಕ್ರìಮ್‌, ಇಂಗ್ಲೆಂಡಿನ ಆಲ್‌ರೌಂಡರ್‌ ಮೊಯಿನ್‌ ಅಲಿ ಮಧ್ಯಮ ಕ್ರಮಾಂಕವನ್ನು ಭರ್ತಿಗೊಳಿಸಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಮತ್ತು ಆಸೀಸ್‌ನ ಆಯಡಂ ಝಂಪ ತಜ್ಞ ಸ್ಪಿನ್ನರ್‌ಗಳಾಗಿದ್ದಾರೆ. ವೇಗದ ಬೌಲಿಂಗ್‌ ವಿಭಾಗದಲ್ಲಿರುವವರು ಹೇಝಲ್‌ವುಡ್‌, ಬೌಲ್ಟ್ ಮತ್ತು ನೋರ್ಜೆ. ಪಾಕಿಸ್ತಾನದ ಶಾಹೀನ್‌ ಶಾ ಅಫ್ರಿದಿ 12ನೇ ಆಟಗಾರನಾಗಿದ್ದಾರೆ.

ಐಸಿಸಿ ತಂಡ: ಡೇವಿಡ್‌ ವಾರ್ನರ್‌, ಜಾಸ್‌ ಬಟ್ಲರ್‌ (ವಿ.ಕೀ.), ಬಾಬರ್‌ ಅಜಂ (ನಾಯಕ), ಚರಿತ ಅಸಲಂಕ, ಐಡನ್‌ , ಮೊಯಿನ್‌ ಅಲಿ, ವನಿಂದು ಹಸರಂಗ, ಆಯಡಂ ಝಂಪ, ಜೋಶ್‌ ಹೇಝಲ್‌ವುಡ್‌, ಟ್ರೆಂಟ್‌ ಬೌಲ್ಟ್, ಅನ್ರಿಚ್‌ ನೋರ್ಜೆ. 12ನೇ ಆಟಗಾರ: ಶಾಹೀನ್‌ ಶಾ ಅಫ್ರಿದಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು