Categories: ಕ್ರೀಡೆ

ಐಪಿಎಲ್‌ 2022 : ಹೊಸ ರೂಲ್ಸ್‌ ಜಾರಿಗೆ ತಂದ ಬಿಸಿಸಿಐ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 15ನೇ ಆವೃತ್ತಿ ಆರಂಭಕ್ಕೂ ಮುನ್ನ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿದೆ. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ 10 ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿವೆ.

ಮೊದಲ ದಿನ ಅಂದರೆ ಮಾ.16ಕ್ಕೆ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಮುಖಾಮುಖಿಯಾಗಲಿವೆ.

65 ದಿನಗಳ ಕಾಲ ನಡೆಯಲಿರುವ ಈ ಪಂದ್ಯದಲ್ಲಿ 70 ಲೀಗ್ ಪಂದ್ಯಗಳು ಮತ್ತು 4 ಪ್ಲೇ ಆಫ್ ಪಂದ್ಯಗಳು ನಡೆಯಲಿವೆ.
ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಬಿಸಿಸಿಐ ಹೊಸ ರೂಲ್ಸ್ ತಂದಿದೆ.

ಹೊಸ ರೂಲ್ಸ್:

  • 2022 ಐಪಿಎಲ್‌ ಲೀಗ್‌ ನಲ್ಲಿ ಡಿಸಿಷನ್‌ ರಿವ್ಯೂ ಸಿಸ್ಟಮ್‌ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಹೊಸ ನಿಯಮದ ಪ್ರಕಾರ, ಈ ಆವೃತ್ತಿಯ ಪ್ರತಿ ಇನ್ನಿಂಗ್ಸ್‌ ನಲ್ಲಿ ಎರಡೂ ತಂಡಗಳು ಅಂಪೈರ್‌ ತೀರ್ಪಿನ ವಿರುದ್ಧ 2 ಬಾರಿ ರಿವ್ಯೂ ಪಡೆಯಬಹುದು ಎಂದು ತಿಳಿಸಿದೆ.
  • ಬ್ಯಾಟರ್‌ (ಸ್ಟ್ರೈಕರ್) ಕ್ಯಾಚ್‌ ನೀಡಿ ಔಟ್‌ ಆದರೆ, ಅವರ ಜಾಗಕ್ಕೆ ಹೊಸ ಬ್ಯಾಟರ್‌ ಬಂದು ಆಡಬೇಕೇ ಹೊರತು ನಾನ್‌ ಸ್ಟ್ರೈಕರ್‌, ಸ್ಟ್ರೈಕರ್‌ ಜಾಗ ಪಡೆದುಕೊಳ್ಳುವಂತಿಲ್ಲ.
  • ಫೈನಲ್‌ ಅಥವಾ ಪ್ಲೈ ಆಫ್‌ ನಲ್ಲಿ ಟೈ ಆದ ಬಳಿಕ ಸೂಪರ್‌ ಓವರ್‌ ನಲ್ಲಿಯೂ ಯಾವುದೇ ನಿರ್ಧಾರ ಕೈಗೊಳ್ಳಲಾಗದಿದ್ದರೆ ಲೀಗ್‌ ಹಂತದಲ್ಲಿ ತಂಡದ ಪ್ರದರ್ಶನದ ಮೇಲೆ ಫಲಿತಾಂಶ ನೀಡಲಾಗುತ್ತದೆ. ಲೀಗ್‌ ಪಂದ್ಯದಲ್ಲಿ ಮೊದಲ ಸ್ಥಾನದಲ್ಲಿರುವ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಗುತ್ತದೆ.
  • ಇದರ ಜತೆಗೆ ತಂಡದ ಯಾರೊಬ್ಬ ಸದಸ್ಯರು ಕೋವಿಡ್‌ ಸೋಂಕಿಗೆ ತುತ್ತಾಗಿ ಉಳಿದ ಸದಸ್ಯರು ಮೈದಾನಕ್ಕಿಳಿಯಲು ಸಾಧ್ಯವಾಗದಿದ್ದರೆ, ಆ ತಂಡಕ್ಕೆ ಮತ್ತೊಂದು ದಿನ ಅವಕಾಶ ಕಲ್ಪಿಸಬೇಕಾಗಿದೆ.
Sneha Gowda

Recent Posts

ಕೇರಳದ ಕೆಲವು ರಾಜ್ಯಗಳಿಗೆ ಮೇ 20 ರವರೆಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಕೇರಳದ ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಮೇ 20 ರವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್…

37 mins ago

ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ಪೊಲೀಸ್‌ ವಶಕ್ಕೆ

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡವು ಭಾನುವಾರ…

40 mins ago

5 ದಿನ ಮೀನುಗಾರಿಕೆಗೆ ತೆರಳದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸೂಚನೆ

ಮೇ 18 ರಿಂದ ಮೇ 22 ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ…

54 mins ago

ರಾಹುಲ್, ಅಖಿಲೇಶ್ ಯಾದವ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ

 ಪಕ್ಷದ ಕಾರ್ಯಕರ್ತರ ಗದ್ದಲ, ಕಾಲ್ತುಳಿತದಂತಹ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್…

54 mins ago

ಉತ್ತರ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು: ಭೋಜೇಗೌಡ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ನಕಲು ಆಗುತ್ತಿರುವುದನ್ನು ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.ಭೋಜೇಗೌಡ ಒಪ್ಪಿಕೊಂಡಿದ್ದಾರೆ. ಈ ಬಾರಿ…

1 hour ago

ನಗರ ಸಾರಿಗೆ ಬಸ್‌ ಮಾರ್ಗ ಬದಲಾಯಿಸಲು ಆಗ್ರಹ

ನಗರದಲ್ಲಿ ಸಂಚರಿಸುವ ನಗರ ಸಾರಿಗೆಯ ಎಲ್ಲ ಬಸ್‌ಗಳು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ವೃತ್ತದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು…

1 hour ago