ಕ್ರೀಡೆ

ಐಪಿಎಲ್ 2022: ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ರಿಷಬ್ ಪಂತ್

ಮುಂಬೈ: ಐಪಿಎಲ್ 2022ಕ್ಕೆ ಉಳಿಸಿಕೊಳ್ಳಬೇಕಾದ 27 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಾಯಕ ಎಂಎಸ್ ಧೋನಿ ಸೇರಿದಂತೆ 4 ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ.

ಧೋನಿ ಚೆನ್ನೈನಿಂದ ರಿಟೇನ್ ಆಗಿರುವ ಎರಡನೇ ಆಟಗಾರನಾಗಿದ್ದು, ಕೂಲ್ ಕ್ಯಾಪ್ಟನ್ 12 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಕಳೆದ ಋತುವಿನಲ್ಲಿ ಅಂದರೆ 2021ರಲ್ಲಿ ಧೋನಿ 15 ಕೋಟಿ ಗಳಿಸಿದ್ದರು. ರವೀಂದ್ರ ಜಡೇಜಾ ಅವರಿಗೆ ಗರಿಷ್ಠ 16 ಕೋಟಿ ರೂಪಾಯಿ ಪಡೆಯಲಿದ್ದಾರೆ. ಈ ಸೀಜನ್ ನಲ್ಲಿ ಉಳಿಸಿಕೊಂಡಿರುವ 27 ಆಟಗಾರರ ಪೈಕಿ 5 ಆಟಗಾರರು ಸಂಭಾವನೆಯಲ್ಲಿ ಧೋನಿಯನ್ನು ಹಿಂದಿಕ್ಕಿದ್ದಾರೆ.

ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸೇರಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಿಂದ ಸ್ಯಾಮ್ಸನ್ 14 ಕೋಟಿ ರೂಪಾಯಿ, ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ 16 ಕೋಟಿ, ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ 14 ಕೋಟಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 16 ಕೋಟಿ ಮತ್ತು ಆರ್‌ಸಿಬಿ ಪ್ರಾಂಚೈಸಿ 15 ಕೋಟಿಗೆ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ, ಕೆಕೆಆರ್ ಆಂಡ್ರಾ ರಸೆಲ್ ಮತ್ತು ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬುಮ್ರಾ ಅವರನ್ನು 12 ಕೋಟಿಗೆ ಉಳಿಸಿಕೊಂಡಿದ್ದು, ಅದು ಧೋನಿ ಪಡೆಯುವ ಸಂಭಾವನೆಗೆ ಸಮನಾಗಿದೆ.

ಪಂಜಾಬ್ 2 ಆಟಗಾರರನ್ನು ಉಳಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ ಅವರನ್ನು 14 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಅರ್ಷದೀಪ್ ಸಿಂಗ್ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಸನ್ ರೈಸರ್ಸ್ ಹೈದರಾಬಾದ್ 3 ಆಟಗಾರರನ್ನು ಉಳಿಸಿಕೊಂಡಿದೆ. ಕೇನ್ ವಿಲಿಯಮ್ಸನ್ 14 ಕೋಟಿಗೆ ಉಳಿಸಿಕೊಂಡರು. ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲಿಕ್ ತಲಾ 4 ಕೋಟಿಗೆ ಉಳಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ 4 ಆಟಗಾರರನ್ನು ಉಳಿಸಿಕೊಂಡಿದೆ. ರಿಷಬ್ ಪಂತ್, 16 ಕೋಟಿ ರೂ., ಅಕ್ಷರ್ ಪಟೇಲ್ 9 ಕೋಟಿ ರೂ. ಪೃಥ್ವಿ ಶಾ – 7.5 ಕೋಟಿ ಮತ್ತು ಎನ್ರಿಕ್ ನಾರ್ಕಿಯಾ 6.5 ಕೋಟಿ ರೂ. ಕೋಲ್ಕತ್ತಾ ನೈಟ್ ರೈಡರ್ಸ್ 4 ಆಟಗಾರರನ್ನು ಉಳಿಸಿಕೊಂಡಿದೆ. ಆಂಡ್ರೆ ರಸೆಲ್ 12 ಕೋಟಿಗೆ ಉಳಿಸಿಕೊಂಡಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿ ತಲಾ 8 ಕೋಟಿಗೆ ಉಳಿಸಿಕೊಂಡಿದ್ದಾರೆ. ಸುನಿಲ್ ನರೈನ್ 6 ಕೋಟಿಗೆ ಉಳಿಸಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 3 ಆಟಗಾರರನ್ನು ಉಳಿಸಿಕೊಂಡಿದೆ. ಸಂಜು ಸ್ಯಾಮ್ಸನ್ 14 ಕೋಟಿ ಪಡೆಯಲಿದ್ದಾರೆ. 10 ಕೋಟಿಗೆ ಜೋಸ್ ಬಟ್ಲರ್ ಅವರನ್ನು ಉಳಿಸಿಕೊಳ್ಳಲಾಗಿದೆ. ಯಶಸ್ವಿ ಜೈಸ್ವಾಲ್ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.

ಅಹಮದಾಬಾದ್ ಮತ್ತು ಲಕ್ನೋ ತಂಡಗಳು ತಲಾ 3 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಈ ಮೂವರು ಆಟಗಾರರಲ್ಲಿ ಇಬ್ಬರಿಗಿಂತ ಹೆಚ್ಚು ಭಾರತೀಯರು ಇರುವಂತಿಲ್ಲ ಅಥವಾ ಒಬ್ಬರಿಗಿಂತ ಹೆಚ್ಚು ವಿದೇಶಿ ಆಟಗಾರರು ಇರುವಂತಿಲ್ಲ. ಅಲ್ಲದೆ, ಒಬ್ಬ ಅನ್‌ಕ್ಯಾಪ್ಡ್ ಆಟಗಾರನನ್ನು ಹೊಸ ತಂಡಗಳು ಆಯ್ಕೆ ಮಾಡಬಹುದು. ರಿಟೆನ್ಷನ್ ಮುಗಿದ ನಂತರ, ಹೊಸ ತಂಡಗಳು ತಮ್ಮ 3 ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ಐಪಿಎಲ್ 2022ರಲ್ಲಿ 8 ತಂಡಗಳ ಬದಲಿಗೆ 10 ತಂಡಗಳು, 10 ತಂಡಗಳು ಗ್ರೌಂಡ್ ಗೆ ಇಳಿಯಲಿವೆ. ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಲಕ್ನೋದಿಂದ 20 ಕೋಟಿ ಪಡೆಯುವ ಸಾಧ್ಯತೆ ಇದೆ ಅಂತಾ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೊತ್ತಕ್ಕೆ ಬಿಕರಿಯಾದ್ರೆ, ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಕೆ.ಎಲ್.ರಾಹುಲ್ ಆಗಲಿದ್ದಾರೆ.

Gayathri SG

Recent Posts

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

24 mins ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

39 mins ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

1 hour ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

2 hours ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

2 hours ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

2 hours ago