Categories: ಕ್ರೀಡೆ

ಐಪಿಎಲ್ 2022ರ ಆವೃತ್ತಿಯ ಮೆಗಾ ಹರಾಜಿಗೆ ಆಟಗಾರರ ಅಂತಿಮ ಪಟ್ಟಿ ಸಿದ್ದ !

ಐಪಿಎಲ್ 2022ರ ಆವೃತ್ತಿಯ ಮೆಗಾ ಹರಾಜಿಗೆ ಆಟಗಾರರ ಅಂತಿಮ ಪಟ್ಟಿ ಸಿದ್ದವಾಗಿದ್ದು, ಒಟ್ಟು 590 ಆಟಗಾರರ ಈ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಮಂಗಳವಾರ ಐಪಿಎಲ್ ಮಂಡಳಿ ಈ ಕುರಿತ ಪಟ್ಟಿ ಬಿಡುಗಡೆ ಮಾಡಿದ್ದು, ಹರಾಜಿಗೆ ನೋಂದಣಿ ಮಾಡಿಕೊಂಡಿದ್ದ 1200ಕ್ಕೂ ಹೆಚ್ಚು ಆಟಗಾರರಲ್ಲಿ 590 ಆಟಗಾರರನ್ನು ಅಂತಿಮಗೊಳಿಸಿದೆ.

ಭಾರತದಿಂದ ಶ್ರೇಯಸ್​ ಅಯ್ಯರ್​, ಶಿಖರ್ ಧವನ್​, ಆರ್​ ಅಶ್ವಿನ್​, ಮೊಹಮ್ಮದ್​ ಶಮಿ, ಇಶಾನ್ ಕಿಶನ್​, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಯುಜ್ವೇಂದ್ರ ಚಹಲ್​, ಸೇರಿದಂತೆ ಹಲವಾರು ಭಾರತೀಯ ತಾರೆಗಳು ಹರಾಜಿನಲ್ಲಿದ್ದಾರೆ.

ಇನ್ನು ಬಿಡ್​​ನಲ್ಲಿ 48 ಆಟಗಾರರು 2 ಕೋಟಿ ರೂ.ಗಳನ್ನು ತಮ್ಮ ಮೂಲ ಬೆಲೆಯನ್ನಾಗಿ ಘೋಷಿಸಿಕೊಂಡಿದ್ದು, 20 ಆಟಗಾರರು 1.15 ಕೋಟಿ ರೂ.ಗಳನ್ನು, 34 ಆಟಗಾರರು 1 ಕೋಟಿ ರೂಪಾಯಿಗಳನ್ನು ಮೂಲಬೆಲೆಯನ್ನಾಗಿ ಘೋಷಿಸಿಕೊಂಡಿದ್ದಾರೆ.

ಒಟ್ಟು 590 ಆಟಗಾರರಲ್ಲಿ 370 ಭಾರತೀಯ ಆಟಗಾರರು ಮತ್ತು 220 ವಿದೇಶಿ ಆಟಗಾರರು 2022ರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆಟಗಾರರನ್ನು ಪ್ರತಿ ಫ್ರಾಂಚೈಸಿ ಗರಿಷ್ಠ 25 ಆಟಗಾರನ್ನು ಹೊಂದಲು ಅವಕಾಶವಿದೆ. ಹರಾಜಿನಲ್ಲಿ 70 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.

ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ನಡೆಯಲಿದೆ.

ಹರಾಜಿನಲ್ಲಿರುವ ವಿದೇಶಿ ಆಟಗಾರರ ಪಟ್ಟಿ
ಆಫ್ಘಾನಿಸ್ತಾನ 17, ಆಸ್ಟ್ರೇಲಿಯಾ 47, ಬಾಂಗ್ಲಾದೇಶ 5, ಇಂಗ್ಲೆಂಡ್​ 24, ನ್ಯೂಜಿಲ್ಯಾಂಡ್​ 24, ದಕ್ಷಿಣ ಆಫ್ರಿಕಾ 33, ಶ್ರೀಲಂಕಾ 23, ವೆಸ್ಟ್ ಇಂಡೀಸ್​ 34, ನೇಪಾಳ 1, ಐರ್ಲೆಂಡ್ 5, ಜಿಂಬಾಬ್ವೆ1, ನಮೀಬಿಯಾ 3, ಅಮೆರಿಕ 1, ಸ್ಕಾಟ್ಲೆಂಡ್​ 2.

Sneha Gowda

Recent Posts

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

28 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

35 mins ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

47 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

57 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

1 hour ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

2 hours ago