ಮೂಡುಬಿದಿರೆ: ಭುವನೇಶ್ವರದಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸಂಬಂಧಪಟ್ಟ 13 ಮಂದಿ ಅಥ್ಲೀಟ್ಗಳು ಸ್ಥಾನ ಪಡೆದಿದ್ದಾರೆ.
ಮೂಡುಬಿದಿರೆಯಲ್ಲಿ ಬುಧವಾರ ಪತ್ರಕರ್ತರೊಡನೆ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ್ ಆಳ್ವಾ, ‘ಏಷ್ಯನ್ ಕೂಟದಲ್ಲಿ ಎಂ.ಆರ್. ಪೂವಮ್ಮ, ಅಭಿಷೇಕ್ ಶೆಟ್ಟಿ, ಜಾಯ್ ಲಿನ್ ಲೋಬೊ, ಸಿದ್ದಾರ್ಥ ನಾಯಕ್, ಚೇತನ್, ನಯನಾ ಜೇಮ್ಸ್, ಸಂಷೀರ್, ಶೀನಾ, ಅನು ರಾಘವನ್, ಅನಾಮಿಕ, ಸಂತೋಷ್, ಜಕ್ತರ್ ಸಿಂಗ್, ಪ್ರವೀಣ್ ಮುತ್ತುಕುಮಾರ್ ಸ್ಪರ್ಧಿಸಲಿದ್ದಾರೆ. ಇವರಲ್ಲಿ ಕೆಲವರು ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಹಲವು ಮಂದಿ ಪ್ರಸಕ್ತ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ’ ಎಂದು ತಿಳಿಸಿದರು..