ಅಬುಧಾಬಿ: ಮಾಜಿ ಚಾಂಪಿಯನ್ ಶ್ರೀಲಂಕಾ ವಿರುದ್ಧ 91 ರನ್ ಗಳ ಗೆಲುವು ದಾಖಲಿಸಿಕೊಂಡ ಅಪ್ಘಾನಿಸ್ತಾನ ಏಶ್ಯಾಕಪ್ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಟೂರ್ನಿಯಲ್ಲಿ ಮುಂದಿನ ಸುತ್ತಿಗೇರಲು ಶ್ರೀಲಂಕಾಗೆ ಗೆಲುವು ಅನಿವಾರ್ಯವಾಗಿತ್ತು. ಆದರೆ ಎಲ್ಲಾ ವಿಭಾಗದಲ್ಲೂ ಕಳೆದ ಪ್ರದರ್ಶನ ನೀಡಿದ ಲಂಕಾ ಸೋಲಿನೊಂದಿಗೆ ಟೂರ್ನಿಯಿಂದಲೇ ಹೊರನಡೆಯಿತು.
250 ರನ್ ಗಳ ಗೆಲುವಿನ ಗುರಿ ಪಡೆದ ಲಂಕಾ, ಅಪ್ಘಾನ್ ಸ್ಪಿನ್ನರ್ ಗಳಾದ ರಶೀದ್ ಖಾನ್(2), ಮುಹಮ್ಮದ್ ನಬಿ(2) ಮತ್ತು ಮುಜೀಬುರ್ರಹ್ಮಾನ್(2) ದಾಳಿಗೆ ಕಂಗೆಟ್ಟು ಕುಸಿತಕ್ಕೆ ಒಳಗಾಯಿತು.
ಮೊದಲ ಪಂದ್ಯದಲ್ಲಿ ಲಂಕಾ 137 ರನ್ ಗಳಿಂದ ಬಾಂಗ್ಲಾದೇಶ ವಿರುದ್ಧ ಸೋಲುಂಡಿತ್ತು. ಲಂಕಾ ವಿರುದ್ಧ ಅಪ್ಘಾನ್ ಗೆ ಇದು ಮೊದಲ ಗೆಲುವಾಗಿದೆ.