News Karnataka Kannada
Thursday, April 25 2024
ಕ್ರೀಡೆ

ಸ್ಯಾಮ್ಸನ್, ಸ್ಮಿತ್ ಭರ್ಜರಿ ಆಟ: ರಾಜಸ್ಥಾನ್ ರಾಯಲ್ಸ್ ಶುಭಾರಂಭ

Photo Credit :

ಸ್ಯಾಮ್ಸನ್, ಸ್ಮಿತ್ ಭರ್ಜರಿ ಆಟ: ರಾಜಸ್ಥಾನ್ ರಾಯಲ್ಸ್ ಶುಭಾರಂಭ

ಶಾರ್ಜಾ: ಯುವ ಆಟಗಾರ ಸಂಜು ಸ್ಯಾಮ್ಸನ್ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಭರ್ಜರಿ ಬ್ಯಾಟಿಂಗ್ ನಿಂದ ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ್ ಮೊದಲ ವಿಕೆಟನ್ನು ಬೇಗನೆ ಕಳಕೊಂಡರೂ ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಸಂಜು ಸ್ಯಾಮ್ಸನ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ದು, 32 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 74 ರನ್ ಸಿಡಿಸಿದರು.

ಇನ್ನೊಂದು ಬದಿಯಲ್ಲಿ ಸ್ಮಿತ್ ಕೂಡ ಸ್ಯಾಮ್ಸನ್ ಗೆ ಉತ್ತಮ ಜತೆಯಾಟ ನೀಡಿ 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 69 ರನ್ ಬಾರಿಸಿದರು. ಇವರಿಬ್ಬರು 121 ರನ್ ಜತೆಯಾಟ ನಡೆಸಿ, ತಂಡವು 200ರ ಗಡಿದಾಟಲು ನೆರವಾದರು. 20 ಓವರ್ ಗಳ ಅಂತ್ಯಕ್ಕೆ ರಾಜಸ್ಥಾನ್ ಏಳು ವಿಕೆಟ್ ನಷ್ಟಕ್ಕೆ 217 ರನ್ ಬಾರಿಸಿತ್ತು.

ಇದಕ್ಕೆ ಉತ್ತರಿಸಿದ ಚೆನ್ನೈ ಡು ಪ್ಲೆಸಿಸ್ 72, ಶೇನ್ ವಾಟ್ಸನ್ 33 ಮತ್ತು ಕಪ್ತಾನ ಮಹೇಂದ್ರ ಸಿಂಗ್ ಧೋನಿ 29 ರನ್ ಹೊರತಾಗಿಯೂ ಗುರಿ ಬೆನ್ನಟ್ಟಲು ಸಾಧ್ಯವಾಗದೆ 200 ರನ್ ಮಾಡಲಷ್ಟೇ ಶಕ್ತವಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು