News Karnataka Kannada
Tuesday, April 23 2024
Cricket
ಮೈಸೂರು

ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌: 4ಚಿನ್ನ, 1ಬೆಳ್ಳಿ ಗೆದ್ದ ಕುಸುಮಾ ಭೀಮಯ್ಯ

Kusuma Bheemayya
Photo Credit : News Kannada

ಮೈಸೂರು, ಮೇ.6 : ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಲ್ಲಿ ಜಿಲ್ಲೆಯ ಮೂಲದ ಕುಸುಮಾ ಭೀಮಯ್ಯ ಅವರು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಗೆದ್ದು ಕೀರ್ತಿ ತಂದಿದ್ದಾರೆ. ಮೈಸೂರಿನ ಸ್ಪೋರ್ಟ್ಸ್‌ ಪಾರ್ಕ್‌ ನಲ್ಲಿ ಫಿಟ್‌ ನೆಸ್‌ ಮತ್ತು ಏರೋಬಿಕ್ಸ್‌ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ಕುಸುಮಾ ಅವರು 400 ಮೀಟರ್‌ , 800 ಮೀಟರ್‌ , 4×400 ಮತ್ತು 4×1000 ಮೀಟರ್‌ ರಿಲೇ ಒಟದಲ್ಲಿ ಚಿನ್ನದ ಪದಕ ಗಳಿಸಿದ್ದು 200 ಮೀಟರ್‌ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಚೆನ್ನೈನಲ್ಲಿ ಕಳೆದ ವಾರ ನಡೆದ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ನಲ್ಲಿ 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಭಾಗವಹಿಸಿ ಈ ಗೆಲುವು ದಾಖಲಿಸಿದ ಕುಸುಮಾ ಅವರು ಈ ಗೆಲುವಿನ ಮೂಲಕ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಅಂತ್ರ್ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ. ಉತ್ತಮ ಕ್ರೀಡಾಪಟು ಅಗಿರುವ ಕುಸುಮಾ ಅವರು ಈ ಹಿಂದೆ ಮಲೇಷ್ಯಾದಲ್ಲಿ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ನಲ್ಲಿ ಮೂರು ಚಿನ್ನದ ಪದಕ ಗಳಿಸಿದ್ದರು.

ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಮುಂದಿನ ಗುರಿ ಅಂತರ್ರಾಷ್ಟ್ರೀಯ ಅಥ್ಲೆಟಿಕ್ಸ್‌ ನಲ್ಲಿ 200, 400 ಮತ್ತು 800 ಮತ್ತು 4×100 ರಿಲೇ ಓಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ಆಗಿದ್ದು ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತಿದ್ದೇನೆ ಎಂದರು. ಮೂಲತಃ ಮೂರ್ನಾಡು ಸಮೀಪದ ಬೇತ್ರಿ ಬಾಡಗ ಗ್ರಾಮದ ಕಂಬೀರಂಡ ಕಿಟ್ಟು ಕಾಳಪ್ಪ ಮಾಸ್ಟರ್‌ ಅವರ ಪುತ್ರಿ ಆಗಿದ್ದು ಭೀಮಯ್ಯ ಅವರನ್ನು ವಿವಾಹವಾಗಿದ್ದಾರೆ. ಇವರ ಪತಿ ಭೀಮಯ್ಯ ಅವರು ಕೂಡ ಕ್ರೀಡಾಪಟು ಆಗಿದ್ದು ಗೋಣಿಕೊಪ್ಪದ ಕಾಪ್ಸ್‌ ಶಾಲೆಯಲ್ಲಿ 20 ವರ್ಷಗಳ ಕಾಲ ಕ್ರೀಡಾ ತರಬೇತುದಾರರಾಗಿ ಕೆಲಸ ಮಾಡಿದ್ದು ಈಗ ಮೈಸೂರಿನಲ್ಲಿ ತರಬೇತುದಾರರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು