News Karnataka Kannada
Sunday, April 21 2024
Cricket
ಕ್ರೀಡೆ

ಮಹಿಳಾ ಟ್ವೆಂಟಿ20 ಟೂರ್ನಿ: ಈ ಬಾರಿ ಕ್ವಾರಂಟೈನ್‌ ಅಗತ್ಯ ಇಲ್ಲ

Cricket Bat
Photo Credit :

ನವದೆಹಲಿ:  ಮಹಿಳೆಯರ ಟ್ವೆಂಟಿ20 ಟೂರ್ನಿ ಇದೇ 18ರಂದು ಆರಂಭವಾಗಲಿದೆ. ಈ ಬಾರಿ ಮಹಿಳೆಯರ ದೇಶಿ ಟ್ವೆಂಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವವರು ಕ್ವಾರಂಟೈನ್‌ಗೆ ಒಳಗಾಗಬೇಕಾದ ಅಗತ್ಯವಿಲ್ಲ.

ಬಯೊಬಬಲ್‌ ವ್ಯವಸ್ಥೆಯನ್ನು ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.ಕೆಲವು ತಿಂಗಳಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಸದ್ಯ ಕ್ವಾರಂಟೈನ್ ಕೈಬಿಡಲು ಬಿಸಿಸಿಐ ನಿರ್ಧರಿಸಿದೆ.

 ದೇಶದ ಆರು ಕ್ರೀಡಾಂಗಣಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಕೋವಿಡ್ -19ರಿಂದಾಗಿ ಹಿಂದಿನ ಎರಡು ವರ್ಷಗಳಿಂದ ಕ್ವಾರಂಟೈನ್ ಕಡ್ಡಾಯವಾಗಿತ್ತು.

ಎರಡು ವರ್ಷಗಳ ನಂತರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಹಂತದ ಪಂದ್ಯಗಳು ನಡೆದಿದ್ದವು. ಆಗ ಆಟಗಾರರಿಗೆ ಐದು ದಿನಗಳ ಕ್ವಾರಂಟೈನ್ ಕಡ್ಡಾಯವಾಗಿತ್ತು.

ನ್ಯೂಜಿಲೆಂಡ್‌ನಲ್ಲಿ ಕಳೆದ ವಾರ ಮುಕ್ತಾಯಗೊಂಡ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತದ ಆಟಗಾರ್ತಿಯರ ಪೈಕಿ ಬಹುತೇಕರು ದೇಶಿ ಟೂರ್ನಿಯಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಐದು ಎಲೀಟ್ ಗುಂಪುಗಳಲ್ಲಿ ತಲಾ ಆರು ತಂಡಗಳು ಇರಲಿದ್ದು ಪ್ಲೇಟ್ ಗುಂಪಿನಲ್ಲಿ ಏಳು ತಂಡಗಳು ಇರಲಿವೆ. ಪುದುಚೇರಿ, ತಿರುವನಂತಪುರ, ರಾಜ್‌ಕೋಟ್‌, ಮೊಹಾಲಿ, ರಾಂಚಿ ಮತ್ತು ಗುವಾಹಟಿಯಲ್ಲಿ ಪಂದ್ಯಗಳು ನಡೆಯಲಿವೆ. ನಾಕೌಟ್ ಹಂತದ ಹಣಾಹಣಿಗೆ ಸೂರತ್‌ ಆತಿಥ್ಯ ವಹಿಸಲಿದೆ. ಪ್ರತಿ ನಗರದ ಎರಡು ಕ್ರೀಡಾಂಗಣಗಳಲ್ಲಿ ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿವೆ. ಬೆಳಿಗ್ಗಿನ ಪಂದ್ಯಗಳು 8.30ಕ್ಕೆ ಆರಂಭವಾಗಲಿದ್ದು ಸಂಜೆಯ ಪಂದ್ಯ 4.30ರಿಂದ ಹೊನಲು ಬೆಳಕಿನಲ್ಲಿ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು